ಅರಣ್ಯ ಸಂರಕ್ಷಿಸಲು ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರ ಆರಂಭ

63

ಬೆಂಗಳೂರು : ಅರಣ್ಯ ಸಂರಕ್ಷಿಸಲು ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರ ಆರಂಭ ರೈತರಿಗೆ, ಸಂಶೋಧಕರಿಗೆ ಮತ್ತು ಸ್ಥಳೀಯ ಸಮುದಾಯಗಳಿಗೆ ತರಬೇತಿ ಅರಣ್ಯ ಸಂರಕ್ಷಣೆ, ಸ್ಥಳೀಯ ಸಸ್ಯ ಸಂಪತ್ತು ಮತ್ತು ಉದ್ಯಮ ಅಭಿವೃದ್ಧಿಯ ಕುರಿತು ತರಬೇತಿ 

ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿಇದೇ ಮೊದಲ ಬಾರಿಗೆ ವನ ವಿಜ್ಞಾನ ಕೇಂದ್ರವನ್ನು ಆರಂಭಿಸಲಾಗಿದೆ.

ಅರಣ್ಯ ಕ್ಷೇತ್ರದಲ್ಲಿ ರೈತರು, ಸಂಶೋಧಕರು ಮತ್ತು ಸ್ಥಳೀಯ ಸಮುದಾಯಗಳಿಗೆ ತರಬೇತಿ ನೀಡಲು ಹಾಗೂ ಅರಣ್ಯ ಅಧಾರಿತ ಜೀವನೋಪಾಯಗಳನ್ನು ವಿಸ್ತರಿಸಲು ವನ ವಿಜ್ಞಾನ ಕೇಂದ್ರ ಆರಂಭಿಸಲಾಗಿದೆ. ಕೃಷಿ ವಿವಿ ಜೊತೆ ಒಪ್ಪಂದ ಅರಣ್ಯ ಪ್ರದೇಶವನ್ನು ಹೆಚ್ಚಿಸಿ, ಸ್ಥಳೀಯ ಸಸ್ಯ ಸಂಪತ್ತನ್ನು ರಕ್ಷಣೆ ಮಾಡುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ನಡೆಸಲು ಈ ವನ ನೆರವಾಗಲಿದೆ.

ಜತೆಗೆ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿಅರಣ್ಯ ಪ್ರದೇಶದ ಉಳಿವಿನ ಕುರಿತು ಅರಿವು ಮೂಡಿಸಲು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಡಬ್ಲ್ಯುಎಸ್‌ಟಿ) ಜತೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಒಪ್ಪಂದ ಮಾಡಿಕೊಂಡಿವೆ. ಈ ಪ್ರಕಾರ, ಕೇಂದ್ರದಲ್ಲಿ ಕೈಗೊಳ್ಳುವ ಚಟುವಟಿಕೆಗಳಿಗೆ ಪ್ರ ಜಿಕೆವಿಕೆ ಕೃಷಿ ಮೇಳದಲ್ಲಿ ಗಮನ ಸೆಳೆದ 7 ಲಕ್ಷ ರೂಪಾಯಿ ಹೋತ..! ತಿ ವರ್ಷ ಐಡಬ್ಲ್ಯುಎಸ್‌ಟಿ ಧನಸಹಾಯ ಒದಗಿಸಬೇಕು.

‘ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯು (ಐಸಿಎಫ್‌ಆರ್‌ಇ) ತನ್ನಲ್ಲಿಪಠ್ಯವಿರುವ ಮರಗಳ ತಳಿಗಳು, ಅರಣ್ಯ ತಂತ್ರಜ್ಞಾನಗಳನ್ನು ಒದಗಿಸಬೇಕು. ಕೇಂದ್ರದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ಮೂಲಕ ರೈತರಿಗೆ ತಲುಪಿಸಬೇಕು.

ಅರಣ್ಯ ನಿರ್ವಹಣಾ ವಿಧಾನ ಕುರಿತು ಮಾಹಿತಿ ”ವನ ವಿಜ್ಞಾನ ಕೇಂದ್ರದಲ್ಲಿಅರಣ್ಯೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಇದಕ್ಕೆ ಪೂರಕವಾದ ಅರಣ್ಯ ಜಾಗೃತಿ ಶಿಬಿರ, ಅರಣ್ಯ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಕಾನೂನು ಜಾಗೃತಿ, ತೋಟಗಾರಿಕೆ ಹಾಗೂ ಅರಣ್ಯ ಕೃಷಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ.

ಸುಧಾರಿತ ಅರಣ್ಯ ತಳಿ ಅಥವಾ ತಳಿಗಳ ಮಾದರಿಗಳನ್ನು ನರ್ಸರಿಗಳಲ್ಲಿಬೆಳೆದು ರೈತರಿಗೆ ವಿತರಿಸುವ ಜತೆಗೆ ಅರಣ್ಯ ನಿರ್ವಹಣಾ ವಿಧಾನಗಳನ್ನು ತಿಳಿಸಲಾಗುತ್ತದೆ,” ಎಂದು ವನ ವಿಜ್ಞಾನ ಕೇಂದ್ರದ ನೋಡಲ್‌ ಅಧಿಕಾರಿ ಎಚ್‌.ಬಿ. ರಘು ಮಾಹಿತಿ ನೀಡಿದ್ದಾರೆ.

ವನ ವಿಜ್ಞಾನ ಕೇಂದ್ರದ ಮುಖ್ಯ ಉದ್ದೇಶ ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿಅರಿವು ಮೂಡಿಸುವುದು. ಸಸ್ಯ ಸಂಪತ್ತು, ಆಹಾರ/ ಔಷಧೀಯ ಸಸ್ಯಗಳು ಮತ್ತು ಇನ್ನಿತರ ಜೀವ ಸಂಪನ್ಮೂಲಗಳ ಸಂಶೋಧನೆ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಉದ್ಯಮಗಳನ್ನು ಸ್ಥಾಪಿಸುವಂತೆ ರೈತರನ್ನು ಉತ್ತೇಜಿಸುವುದು. ಪರಿಸರ ಸಮತೋಲನ ಕಾಯುವ ಯೋಜನೆಗಳನ್ನು ರೂಪಿಸುವುದು.

ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಪ್ರಾತ್ಯಕ್ಷಿಕೆ ಕೇಂದ್ರ ಪ್ರಾರಂಭ ವನ ವಿಜ್ಞಾನ ಕೇಂದ್ರಕ್ಕೆ ಬೇಕಾಗುವ ಸಂಶೋಧನೆ, ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ತಾಕುಗಳನ್ನು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಪ್ರಾರಂಭಿಸಲಾಗಿದೆ.

ಮಾದರಿ ಅರಣ್ಯ ಸಸ್ಯ ಕ್ಷೇತ್ರಕ್ಕೆ ಬೇಕಾಗುವ ಮರಗಳನ್ನು ಬೆಳೆಸಲಾಗುತ್ತಿದ್ದು, ಕೃಷಿ ಅರಣ್ಯಕ್ಕೆ ಸೂಕ್ತವಾದ ಉತ್ಕೃಷ್ಟ ಸಸಿಗಳ ಉತ್ಪಾದನೆ ಹೆಚ್ಚಿಸಲಾಗುತ್ತದೆ. ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು ಶೀಘ್ರದಲ್ಲೇ ಮೊದಲ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ಜಿಕೆವಿಕೆ ಅಧಿಕಾರಿಗಳು ಹೇಳಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಬಸನಗೌಡ ಪಾಟೀಲ್ ಯತ್ನಾಳ್

“ಬೆಂಗಳೂರು: ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಎಂದು ನನಗನ್ನಿಸುತ್ತದೆ ಎಂದು ಬಸನಗೌಡ...

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...