ಟ್ರಾಫಿಕ್ ಜಾಮ್ ನಿಯಂತ್ರಿಸಲು 2,215 ಕೋಟಿ ರೂ. ಮೊತ್ತದ ಅವಳಿ ಸುರಂಗ ರಸ್ತೆ ಮಾರ್ಗ ನಿರ್ಮಾಣ

37

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು 2,215 ಕೋಟಿ ರೂಪಾಯಿ ಮೊತ್ತದ ಅವಳಿ ಸುರಂಗ ರಸ್ತೆ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹೆಬ್ಬಾಳ ಫ್ಲೈಓವರ್-ಮೇಖ್ರಿ ವೃತ್ತದ ನಡುವೆ ಸುರಂಗ ರಸ್ತೆ ಹಾಗೂ ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಆದೇಶದ ಬಳಿಕ ಅವಳಿ ಸುರಂಗ ರಸ್ತೆ ಮತ್ತು ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.

ಈ ಯೋಜನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಾರ್ಯಗತಗೊಳಿಸಲಿವೆ.

ರಾಷ್ಟ್ರೀಯ ಹೆದ್ದಾರಿ (NH)ಯ ಭಾಗವಾಗಿರುವ ಈ ರಸ್ತೆಯನ್ನು ಇನ್ನು ಮುಂದೆ ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಬ್ಬಾಳ ಕೆರೆ ಸುತ್ತಲೂ ಭೂಮಿಯ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಕ್ಯಾಂಪಸ್‌ನಲ್ಲಿರುವ ಭೂಮಿಯನ್ನು ಸಹ ಈ ಯೋಜನೆಯು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಸಣ್ಣ ಸುರಂಗ ರಸ್ತೆ ಯೋಜನೆಯು ಬಳ್ಳಾರಿ ರಸ್ತೆಯ ಮಧ್ಯದಲ್ಲಿ ಮೇಖ್ರಿ ವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಅಂಡರ್‌ಪಾಸ್ ನಿರ್ಮಾಣ ಮತ್ತು ಹೆಬ್ಬಾಳ ಕೆರೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಾಣದ ಜೊತೆಗೆ ಜಿಕೆವಿಕೆ ಆವರಣದಲ್ಲಿ ಸುರಂಗ ಮಾರ್ಗ ನಿರ್ಮಾಣವನ್ನು ಒಳಗೊಂಡಿರುತ್ತದೆ.”

Leave a comment

Leave a Reply

Your email address will not be published. Required fields are marked *

Related Articles

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...