ಅಮೆರಿಕದ ಸೈಬರ್ ಸೆಕ್ಯುರಿಟಿ ಸಂಸ್ಥೆ ಡೀಪ್‌ವಾಚ್‌ನಿಂದ ಬೆಂಗಳೂರಿನಲ್ಲಿ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ ಆರಂಭ

81

ಬೆಂಗಳೂರು:ಇಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಎಂಜಿನಿಯರಿಂಗ್ ನಾವೀನ್ಯತೆಗೆ ಪ್ರಮುಖ ಆದ್ಯತೆ ಪ್ರಸ್ತುತ 50 ಉದ್ಯೋಗಿಗಳಿದ್ದು, ಮುಂದಿನ ವರ್ಷದೊಳಗೆ 100ಕ್ಕೆ ಹೆಚ್ಚಿಸುವ ಯೋಜನೆ ಸ್ವಾಯತ್ತ ಎಐ ಏಜೆಂಟ್‌ಗಳನ್ನು ನಿರ್ಮಿಸಿ ಸೈಬರ್ ಭದ್ರತಾ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಗುರಿ ದೇಶದ ಜಿಸಿಸಿ ಕೇಂದ್ರಗಳ ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕದ ಸೈಬರ್ ಸೆಕ್ಯುರಿಟಿ ಸಂಸ್ಥೆ ಡೀಪ್‌ವಾಚ್ ತನ್ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಆರಂಭಿಸಿದೆ.

ಅಮೆರಿಕ ಮೂಲದ ಪ್ರಮುಖ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಡೀಪ್‌ವಾಚ್, ನಗರದಲ್ಲಿ ತನ್ನ ನೂತನ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು (ಜಿಸಿಸಿ) ಮಂಗಳವಾರ ಉದ್ಘಾಟಿಸಿದೆ . ಈ ಕೇಂದ್ರವು ಕೃತಕ ಬುದ್ಧಿಮತ್ತೆ (ಎಐ), ಎಂಜಿನಿಯರಿಂಗ್ ಮತ್ತು ನಾವೀನ್ಯತೆಗಳನ್ನು ಬಳಸಿಕೊಂಡು ಸಂಸ್ಥೆಯ ಸೈಬರ್ ಭದ್ರತಾ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ. 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಯಾವುದೇ ಉದ್ಯೋಗಿಗಳನ್ನು ಹೊಂದಿರದಿ ದ್ದ ಡೀಪ್‌ವಾಚ್, ಇದೀಗ 50 ಉದ್ಯೋಗಿಗಳೊಂದಿಗೆ ಕಾರ್ಯಾರಂಭ ಮಾಡಿದೆ. ಮುಂದಿನ ವರ್ಷದೊಳಗೆ ಈ ಸಂಖ್ಯೆಯನ್ನು 100ಕ್ಕೆ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ.

ಬೆಂಗಳೂರಿನ ಈ ಹೊಸ ಕೇಂದ್ರವು ಮುಖ್ಯವಾಗಿ ‘ಏಜೆಂಟಿಕ್ ಎಐ ಸಿಸ್ಟಮ್’ ಅಥವಾ ಸ್ವಾಯತ್ತ ಎಐ ಏಜೆಂಟ್‌ಗಳನ್ನು ನಿರ್ಮಿಸುವತ್ತ ಗಮನಹರಿಸಲಿದೆ. ಈ ತಂತ್ರಜ್ಞಾನವು ಸೈಬರ್ ದಾಳಿಗಳನ್ನು ಪತ್ತೆಹಚ್ಚುವುದು, ತನಿಖೆ ಮಾಡುವುದು ಮತ್ತು ಪ್ರತಿಕ್ರಿಯಿಸುವಂತಹ ಪುನರಾವರ್ತಿತ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಸೈಬರ್ ಸುರಕ್ಷತಾ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ಈಗಾಗಲೇ ಸಂಸ್ಥೆಯು ಘೋಷಿಸಿರುವ ಆರು ಹೊಸ ಎಐ ಏಜೆಂಟ್‌ಗಳ ಪೈಕಿ ಎರಡನ್ನು ಬೆಂಗಳೂರು ತಂಡವೇ ಅಭಿವೃದ್ಧಿಪಡಿಸಿದೆ ಎಂಬುದು ಗಮನಾರ್ಹ.

ವಿಶಿಷ್ಟ ತಂತ್ರಜ್ಞಾನ ಮಾದರಿ ಡೀಪ್‌ವಾಚ್ ‘ಬ್ರಿಂಗ್ ಯುವರ್ ಓನ್ ಟೆಕ್ನಾಲಜಿ’ (ಬಿವೈಒಟಿ) ಎಂಬ ವಿಶಿಷ್ಟ ಮಾದರಿಯನ್ನು ಅನುಸರಿಸುತ್ತದೆ . ಕ್ರೌಡ್‌ಸ್ಟ್ರೈಕ್ ಅಥವಾ ಸೆಂಟಿನೆಲ್‌ಒನ್‌ನಂತಹ ಪ್ರತಿಸ್ಪರ್ಧಿ ಕಂಪನಿಗಳು ತಮ್ಮದೇ ಆದ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಗ್ರಾಹಕರನ್ನು ಒತ್ತಾಯಿಸಿದರೆ, ಡೀಪ್‌ವಾಚ್ ಗ್ರಾಹಕರು ಈಗಾಗಲೇ ಬಳಸುತ್ತಿರುವ ಸೈಬರ್‌ ಸುರಕ್ಷತಾ ತಂತ್ರಜ್ಞಾನಗಳೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳುತ್ತದೆ. ಇದು ಗ್ರಾಹಕರಿಗೆ ತಮ್ಮ ಬೇರೆ ಬೇರೆ ಸುರಕ್ಷತಾ ಸಾಧನಗಳಿಂದ ಬರುವ ಡೇಟಾವನ್ನು ಒಗ್ಗೂಡಿಸಿ, ವೇಗವಾಗಿ ಪ್ರತಿಕ್ರಿಯಿಸಲು ನೆರವಾಗುತ್ತದೆ.

ಭಾರತದಲ್ಲಿ ಸಂಶೋಧನೆಗೆ ಒತ್ತು ಭಾರತದಲ್ಲಿನ ಒಟ್ಟು ಹೂಡಿಕೆಯ ಶೇ. 92ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಹಾಗೂ ಉತ್ಪನ್ನ ನಾವೀನ್ಯತೆಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಉತ್ಪನ್ನ ಅಧಿಕಾರಿ ಆನಂದ್ ರಾಮನಾಥನ್ ತಿಳಿಸಿದ್ದಾರೆ . ಈ ಮೂಲಕ, ಬೆಂಗಳೂರು ಕೇಂದ್ರವನ್ನು ಎಐ ಚಾಲಿತ ಸೈಬರ್ ಸುರಕ್ಷತಾ ನಾವೀನ್ಯತೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ಡೀಪ್‌ವಾಚ್ ಮುಂದಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಗ್ಯಾರೆಂಟಿ ಯೋಜನೆ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್

ಬೆಂಗಳೂರು: ಗ್ಯಾರೆಂಟಿ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಮತ್ತು ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು...

ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆಲುವಿನ ನಗೆ

“ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ಮೂಕಾಂಬಿಕಾ ತಾಯಿಯ ದರ್ಶನ ಪಡೆದ ಉದ್ಯಮಿ ಅನಂತ ಅಂಬಾನಿ

“ಉಡುಪಿ: ಸದ್ದು ಗದ್ದಲವಿಲ್ಲದೆ ದೇಶದ ಪ್ರತಿಷ್ಠಿತ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಂಬಾನಿ ಕುಟುಂಬದ ಅನಂತ ಅಂಬಾನಿ...