ಶಬರಿಮಲೆಯಲ್ಲಿ ಭಕ್ತಸಾಗರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ, ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ

21

ತಿರುವನಂತಪುರಂ (ಕೇರಳ) :ಶಬರಿಮಲೆ ವ್ರತಧಾರಿಗಳಿಗೆ ಭಾರೀ ಅವ್ಯವಸ್ಥೆ, ಕುಡಿಯುವ ನೀರಿಗೆ ಹಾಹಾಕಾರ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಕೇರಳದ ದೇವಸ್ವಂ ಬೋರ್ಡ್ ವಿಫಲ ಎನ್ನುವ ಆರೋಪ ಮಿದುಳು ಸೋಂಕು, ಯಾತ್ರಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಹೊರಡಿಸಿದ ಕರ್ನಾಟಕದ ಆರೋಗ್ಯ ಇಲಾಖೆ

ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ ಶಬರಿಮಲೆಯಲ್ಲಿ ಹಾಲೀ ವರ್ಷದ ಮಂಡಲ ಪೂಜೆ ಮತ್ತು ಮಕರವಿಳಕ್ಕು ಉತ್ಸವ ಆರಂಭವಾಗಿದೆ. ದೇವಾಲಯದ ಬಾಗಿಲು ತೆರೆದ ಬೆನ್ನಲ್ಲೇ, ಕಂಡು ಕೇಳರಿಯದ ಭಕ್ತಸಾಗರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ, ಕ್ಷೇತ್ರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ ಎಂದು ವರದಿಯಾಗಿದೆ.

ಇನ್ನೊಂದು ಕಡೆ, ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಶಬರಿಮಲೆ ಯಾತ್ರೆ ಕೈಗೊಳ್ಳುವ ಕರ್ನಾಟಕದ ಭಕ್ತರಿಗಾಗಿ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಸೋಂಕಿಗೆ ಇದುವರೆಗೆ ಕೇರಳದಲ್ಲಿ ಹತ್ತೊಂಬತ್ತು ಜನ ಸಾವನ್ನಪ್ಪಿದ್ದಾರೆ.

ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಅಯ್ಯಪ್ಪ ವ್ರತಧಾರಿಗಳ ಭಾರೀ ನೂಕುನುಗ್ಗಲು ಉಂಟಾಗಿದೆ. ಸದ್ಯದ ಮಟ್ಟಿಗೆ, ಕೇರಳದ ದೇವಸ್ವಂ ಬೋರ್ಡ್ (ಮುಜರಾಯಿ ಇಲಾಖೆ) ಮತ್ತು ದೇವಾಲಯದ ಆಡಳಿತ ಮಂಡಳಿ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮಾಲಾಧಾರಿಗಳು, ಸರತಿ ಸಾಲನ್ನು ಬಿಟ್ಟು ಮುನ್ನುಗ್ಗುತ್ತಿರುವುದರಿಂದ, ಭಾರೀ ಸಂಖ್ಯೆಯಲ್ಲಿ ಜನದಟ್ಟಣಿ ಉಂಟಾಗಿದೆ. ಮೂಲಸೌಕರ್ಯ ಒದಗಿಸುವಲ್ಲೂ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ. ಇನ್ನೊಂದು ಕಡೆ, ಈಗಲೇ, ಪಂಪಾನದಿ ಮಲಿನಗೊಂಡಿದೆ ಎನ್ನುವ ವರದಿ, ಕೇರಳ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ನೀಲಕ್ಕಲ್ ನಲ್ಲಿ ಮಂಗಳವಾರ (ನ. 18) ಏಳು ಸ್ಪಾಟ್ ಬುಕ್ಕಿಂಗ್ ಕೇಂದ್ರ ತೆರೆಯಲಾಗಿದೆ. ಪಂಪಾದಲ್ಲಿ ಈ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಎಂಟರಿಂದ ಹತ್ತು ತಾಸಿನ ವರೆಗೂ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ. ಶುದ್ದ ನೀರನ್ನು ಒದಗಿಸಲು, ಇನ್ನೂರಕ್ಕೂ ಹೆಚ್ಚುವರಿ ಮಂದಿಯನ್ನು ನಿಯೋಜಿಸಲಾಗಿದೆ.

ಹದಿನೆಂಟು ಮೆಟ್ಟಿಲಿನಲ್ಲಿ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಆಡಳಿತ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸರಿಯಾದ ದರ್ಶನದ ವ್ಯವಸ್ಥೆ ಇಲ್ಲದೇ ಇರುವುದರಿಂದ, ನೂರಾರು ಭಕ್ತರು, ಅಯ್ಯಪ್ಪನ ದರ್ಶನಕ್ಕೆ ಕಾಯದೇ, ಪಂದಳದಲ್ಲೇ ತುಪ್ಪಾಭಿಷೇಕ ನಡೆಸಿ, ವಾಪಸ್ ಆಗುತ್ತಿದ್ದಾರೆಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ. ಈಗಲೇ ಎರಡು ಅಹಿತಕರ ಘಟನೆ ನಡೆದಿದ್ದು, ಅಯ್ಯಪ್ಪನ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ 58ವರ್ಷದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ.

ಇನ್ನೊಂದು ಕಡೆ, ಕರ್ನಾಟಕದಿಂದ ತೆರಳುತ್ತಿದ್ದ 33 ಜನರಿದ್ದ ಬಸ್, ಕೊಟ್ಟಾಯಂ ಸಮೀಪದ ಏರುಮಲೆಯಲ್ಲಿ ತಲೆಕೆಳಗಾಗಿ ಬಿದ್ದಿದೆ. ಅದೃಷ್ಟವಶಾತ್, ಯಾವುದೇ ಸಾವುನೋವು ಸಂಭವಿಸಲಿಲ್ಲ. ವರ್ಚುಯಲ್ ಕ್ಯೂ ಮೂಲಕ, ದಿನವೊಂದಕ್ಕೆ ಎಪ್ಪತ್ತು ಸಾವಿರ ಮತ್ತು ಸ್ಪಾಟ್ ನಲ್ಲಿ ಇಪ್ಪತ್ತು ಸಾವಿರ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಶಬರಿಮಲೆ ದೇವಾಲಯ ಇಟ್ಟುಕೊಂಡಿದೆ.

ಕ್ಯೂ ಕಾಂಪ್ಲೆಕ್ಸ್ ಸ್ಥಾಪಿಸಲು ನಿರ್ಧರಿಸಿದ್ದರೂ, ಅದಿನ್ನೂ ಕಾರ್ಯರೂಪಕ್ಕೆ ಬರದೇ ಇರುವುದೇ ದೊಡ್ಡ ಸಮಸ್ಯೆ ಎನ್ನುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತೀ ನಿಮಿಷಕ್ಕೆ ಸುಮಾರು 80 – 90 ಭಕ್ತರನ್ನು ಹದಿನೆಂಟು ಮೆಟ್ಟಲು ಏರಿಸಿ, ಗರ್ಭಗುಡಿಯ ಕಡೆ ಬಿಡಬೇಕಾದ ಅನಿವಾರ್ಯತೆ ಇರುವುದರಿಂದ, ಜನಸಂದಣಿಯ ನಿಯಂತ್ರಣಕ್ಕೆ ಕೇಂದ್ರ ಮೀಸಲು ಪಡೆಯನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವ್ರತಾಧಾರಿಗಳು, ಕಣ್ಣು ಆಕಡೆ ಈಕಡೆ ಮಿಟಕಾಯಿಸಿದರೆ ಹೋಯಿತು ಎನ್ನುವ ಹಾಗೇ, ಕ್ಷಣಾರ್ಧದಲ್ಲಿ ಅಯ್ಯಪ್ಪನ ದರ್ಶನ ಪಡೆಯಬೇಕಾಗಿದೆ.”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...