ವಿಜಯಪುರ ಜಿಲ್ಲೆಯಲ್ಲಿ ಹೊಸ ಡ್ಯಾಂ ನಿರ್ಮಾಣಕ್ಕೆ ಮುಂದಾದ ಕರ್ನಾಟಕ ಸರ್ಕಾರ.

43

ಬಾಬಾನಗರ ಬಳಿಯ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ. ಬಾಬಾನಗರದ ಹತ್ತಿರ 0.8 ಟಿಎಂಸಿ ಸಾಮರ್ಥ್ಯದ ಜಲ ಸಂಗ್ರಹಾರ ನಿರ್ಮಾಣ. ಬಾಬಾನಗರದ ಹತ್ತಿರ ಡ್ಯಾಂ ನಿರ್ಮಾಣಕ್ಕೆ ಮುಂದಾದ ಸರ್ಕಾರ.

ವಿಜಯಪುರ: ”ತುಬಚಿ – ಬಬಲೇಶ್ವರ ಯೋಜನೆಯಡಿ ಹಂಚಿಕೆಯಾದ ನಮ್ಮ ಪಾಲಿನ ನೀರನ್ನು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಾಬಾನಗರದ ಹತ್ತಿರ 0.8 ಟಿಎಂಸಿ ಜಲಸಂಗ್ರಹಗಾರ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು,” ಎಂದು ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಬಾಬಾನಗರ ಹತ್ತಿರವಿರುವ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಭಾನುವಾರ ಅಧಿಕಾರಿಗಳು, ರೈತ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು. ”ಈ ಯೋಜನೆಯಡಿ 5.5 ಟಿಎಂಸಿ ನೀರು ಇದ್ದರೂ ಸಂಪೂರ್ಣ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ನಮ್ಮ ಪಾಲಿನ 2 ಟಿಎಂಸಿ ನೀರು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಫ್‌ಐಡಿ ಆದ ನಂತರವೂ 3 ಟಿಎಂಸಿ ನೀರು ಮಾತ್ರ ಬಳಕೆಯಾಗುತ್ತದೆ.

ಹಾಗಾಗಿ ಉಳಿದ 2.5 ಟಿಎಂಸಿ ನೀರನ್ನು ಶೇಖರಿಸಿಕೊಂಡು ಗರಿಷ್ಠ ಮಟ್ಟದ ನೀರನ್ನು ಬಳಕೆ ಮಾಡುವ ನಿಟ್ಟಿನಲ್ಲಿ0.8 ಟಿಎಂಸಿ ಜಲಸಂಗ್ರಹಾರ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲರ ಸಲಹೆ-ಸೂಚನೆಗಳನ್ನು ಪಡೆದು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಸರಿಪಡಿಸಲಾಗುವುದು,” ಎಂದರು.

”ಮಳೆಗಾಲದಲ್ಲಿ ಮಾತ್ರ ಏತ ನೀರಾವರಿ ಮೂಲಕ ನೀರನ್ನು ಒದಗಿಸಲಾಗುತ್ತದೆ. ಬೇಸಿಗೆಯಲ್ಲಿಈ ನೀರನ್ನು ಸದ್ಬಳಕೆ ಮಾಡಿಕೊಂಡು ಕೆರೆ-ಹಳ್ಳಗಳಿಗೆ ನೀರೊದಗಿಸಲು, ಯೋಜನೆ ರೂಪಿಸಲಾಗಿದೆ. ಬಾಬಾನಗರದ ಹತ್ತಿರ 500 ಎಕರೆ ಸರಕಾರಿ ಜಮೀನು ಇದ್ದು, ಜಲಸಂಗ್ರಹಗಾರ ನಿರ್ಮಾಣಕ್ಕೆ ಯಾವುದೇ ಭೂಸ್ವಾಧೀನಕ್ಕೆ ಹಣ ವೆಚ್ಚ ಮಾಡುವ ಅವಶ್ಯಕತೆ ಇಲ್ಲ.

ತೆಗ್ಗು ಪ್ರದೇಶ, ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ,” ಎಂದರು. ನೀರಾವರಿ ನಿಗಮ ನಿಯಮಿತದ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರ ಬಿ.ಆರ್‌.ರಾಠೋಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಂಬಣ್ಣ, ನೀರಾವರಿ ತಜ್ಞ ಡಾ.ಹುಗ್ಗಿ ಇತರರಿದ್ದರು. 6 ತಿಂಗಳಲ್ಲಿಕಾಮಗಾರಿ ಪೂರ್ಣ ”ಕಳೆದ 2013 – 18 ರ ಅವಧಿಯಲ್ಲಿ ತುಬಚಿ – ಬಬಲೇಶ್ವರ ಯೋಜನೆಗೆ ಈ ಭಾಗದ ಅತಿ ಎತ್ತರದ ಪ್ರದೇಶವಾದ ಕನಮಡಿ, ಬಾಬಾನಗರ, ಬಿಜ್ಜರಗಿ, ತಿಕೋಟಾ ತಾಲೂಕು ಹಾಗೂ ಸಾವಳಗಿ ಭಾಗದ 1.30 ಲಕ್ಷ ಎಕರೆಗೆ 6.3 ಟಿಎಂಸಿ, 5.5 ತಿಕೋಟಾ ಹೋಬಳಿ, ಸಾವಳಿಗೆ 0.8 ಟಿಎಂಸಿ ನೀರೊದಗಿಸಲು 3,600 ಕೊಟಿ ರೂ. ವೆಚ್ಚ ಮಾಡಲಾಗಿದೆ.

ಈಗಾಗಲೇ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರು ಸಂತಸದಲ್ಲಿದ್ದಾರೆ. ಎಫ್‌ಐಸಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಒದಗಿಸಲಾಗುತ್ತಿದೆ. ಟೆಂಡರ್‌ ಆಗಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಹರಿಸಲಾಗುವುದು,” ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.”

Leave a comment

Leave a Reply

Your email address will not be published. Required fields are marked *

Related Articles

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅವಕಾಶ ನೀಡುವುದಿಲ್ಲ :: ಗೃಹ ಸಚಿವ ಡಾ.ಜಿ.ಪರಮೇಶ್ವರ್

“ಬೆಂಗಳೂರು: ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ. ಯಾವುದೇ ಅಧಿಕಾರಿಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಲು ಅವಕಾಶ...