ಹಿಂದೂ ಜನಾ ಸೇವಾ ಟ್ರಸ್ಟ್(ರಿ)ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಸೇವಾ ಟ್ರಸ್ಟ್ ಪಮ್ಮೊಟ್ಟು ದಿ ಸುಂದರ ಶೆಟ್ಟಿ ಕುಟುಂಬಸ್ಥರಸಹಯೋಗದಲ್ಲಿ ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉಚಿತ ನೇತ್ರಾ ಚಿಕಿತ್ಸ ಮತ್ತು ರಕ್ತದೋತ್ತಡ ಮಧುಮೇಹ ತಪಾಸಣಾ ಶಿಬಿರ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಶಿವಕುಮಾರ್ ಕರ್ಜೆ ಅವರು ನಮ್ಮ ಟ್ರಸ್ಟ್ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಮ್ಮೊಟ್ಟು ಇವರ ಕಾಳಜಿ ಮೇರೆಗೆ ಸಮಾಜ ಸೇವಕರಾದ ದಿವಂಗತ ಸುಂದರ್ ಶೆಟ್ಟಿ ಅವರ ಸಮಾಜ ಸೇವೆಯನ್ನ ನೆನಪಿಡುವ ಉದ್ದೇಶದಿಂದ ಈ ಗ್ರಾಮದ ಜನರಿಗೆ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ, ಉಚಿತ ನೇತ್ರಾ ತಪಾಸಣೆ ನೆಡೆಸಿ ಅಗತ್ಯ ಇರುವ ಜನರಿಗೆ ಕನ್ನಡಕ ವಿತರಿಸುವ ಬಗ್ಗೆ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ ಇಂತಹ ಯಶಸ್ವಿ ಕಾರ್ಯಕ್ರಮ ಸಾರ್ವಜನಿಕರ ಸೇವೆ ಮಾಡುವಂತಹ ಯೋಗ ಭಾಗ್ಯವನ್ನು ಎಲ್ಲರಿಗೂ ಭಗವಂತ ಪರಿಪಾಲಿಸಲಿ ಎಂದು ಹಾರೈಸಿದರು.

ದೇವಸ್ಥಾನದ ಅರ್ಚಕರಾದ ರಂಗನಾಥ ಭಟ್ ಮಾತನಾಡಿ ಭರತ್ ಶೆಟ್ಟಿ ಅವರು ದೇವಸ್ಥಾನದ ಅಧ್ಯಕ್ಷರಾದ ಮೇಲೆ ದೇವಸ್ಥಾನ ದ ಮುಖಂತರ ಸಾಮಾಜಿಕ ಕಳಕಳಿಯಿಂದ ಸಮಾಜ ಮುಖಿ ಕಾರ್ಯಕ್ರಮ ನೆಡೆಸುತ್ತಿರುವುದು ಅಭಿನಂದನೆಗೆ ಅರ್ಹ ಎಂದರು. ಈ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು

ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪಮ್ಮೊಟ್ಟು ಭರತ್ ಶೆಟ್ಟಿ ಪ್ರಸಾದ್ ನೇತ್ರಾಲಯದ ವ್ಯೆದ್ಯರಾದ ಮೋಹನ್, ದಿ ಸುಂದರ ಶೆಟ್ಟಿ ಅವರ ಪತ್ನಿ ರತ್ನ ಶೆಟ್ಟಿ ಸತೀಶ್ ಶೆಟ್ಟಿ ಮುಂಬೈ, ಸಂದೀಪ್ ಶೆಟ್ಟಿ ಅಜೆಕಾರು ಸುಕುಮಾರ್ ಶೆಟ್ಟಿ ಎಣ್ಣೆ ಹೊಳೆ ಕರುಣಾಕರ ಶೆಟ್ಟಿ ಮುದ್ರಾಡಿ ನವೀನ್ ಪೆರ್ಡೂರ್ ಪಮ್ಮೊಟ್ಟು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪುಷ್ಪರಾಜ್ ಶೆಟ್ಟಿ ನಿರೂಪಿಸಿ ವಂದಿಸಿದರು

Leave a comment