ಬೆಂಗಳೂರು : ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಅಡಚಣೆ ದೀಪಾಂಜಲಿನಗರ ನಿಲ್ದಾಣದಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ನಿಂತ ರೈಲು ವಿಜಯನಗರದಲ್ಲೂ ಮತ್ತೊಂದು ರೈಲು ಸ್ಥಗಿತ, ಪ್ರಯಾಣಿಕರ ಪರದಾಟ ಸಂಚಾರ ಸುಗಮಗೊಳ್ಳಲು ಮತ್ತಷ್ಟು ಸಮಯ ಬೇಕೆಂದು ಮೆಟ್ರೋ ಸಿಬ್ಬಂದಿ ಮಾಹಿತಿ ಬೆಳಗ್ಗಿನ ಅವಧಿಯಲ್ಲಿ ಕಚೇರಿಗೆ ತೆರಳುವವರಿಗೆ ತೀವ್ರ ತೊಂದರೆ ನಮ್ಮ ಮೆಟ್ರೋ ನೇರಳ ಮಾರ್ಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನಿಲ್ದಾಣಗಳಲ್ಲಿ ಜನಜಂಗುಳಿ ಉಂಟಾಗಿದೆ.
ಅಕ್ಟೋಬರ್ 30: ನಗರದ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಗುರುವಾರ ಬೆಳಗ್ಗೆ ವ್ಯತ್ಯಯ ಉಂಟಾಗಿದ್ದು, ನೇರಳೆ ಮಾರ್ಗದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ ಮೆಟ್ರೋ ಸೇವೆ ಕೈಕೊಟ್ಟಿದೆ.

ಸುಮಾರು 9 ಗಂಟೆ ಹೊತ್ತಿಗೆ ದೀಪಾಂಜಲಿನಗರ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಸುಮಾರು 10 ನಿಮಿಷಗಳ ಕಾಲ ನಿಂತಿದೆ. ಇದರಿಂದಾಗಿ ಹಿಂದಿನ ಹಾಗೂ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ, ಪ್ಲಾಟ್‌ಫಾರ್ಮ್‌ಗಳು ಜನರಿಂದ ತುಂಬಿ ತುಳುಕಿದವು.
ಇದಾದ ಕೆಲವೇ ನಿಮಿಷಗಳಲ್ಲಿ, ಅಂದರೆ ಒಂಬತ್ತು ಕಾಲು ಸುಮಾರಿಗೆ ವಿಜಯನಗರ ನಿಲ್ದಾಣದಲ್ಲೂ ಮತ್ತೊಂದು ರೈಲು ತಾಂತ್ರಿಕ ಕಾರಣಗಳಿಂದ ನಿಂತಿದೆ. ಸಂಚಾರವನ್ನು ಸುಗಮಗೊಳಿಸಲು ಇನ್ನೂ 10 ನಿಮಿಷಗಳು ಬೇಕಾಗಬಹುದು ಎಂದು ಮೆಟ್ರೋ ಸಿಬ್ಬಂದಿ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅರ್ಧ ಗಂಟೆಯಾದರೂ ಸಮಸ್ಯೆ ಬಗೆಹರಿದಿಲ್ಲ.

ಬೆಳಗ್ಗಿನ ಪೀಕ್ ಅವರ್‌ನಲ್ಲಿ ಉಂಟಾದ ಈ ಸಮಸ್ಯೆಯಿಂದಾಗಿ ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲೇ ಕಾದು ನಿಲ್ಲುವಂತಾಯಿತು. ಸಮಸ್ಯೆಗೆ ನಿಜವಾದ ಕಾರಣ ಏನು? ಸಮಸ್ಯೆ ಯಾವಾಗ ಬಗೆಹರಿಯಲಿದೆ ಎನ್ನುವುದರ ಬಗ್ಗೆ ಬಿಎಂಆರ್‌ಸಿಎಲ್ ಇದುವರೆಗೆ ಯಾವುದೇ ಅಪ್ಡೇಟ್ ನೀಡಿಲ್ಲ.”

Leave a comment