ಅಮೆರಿಕ ಟ್ರಂಪ್‌ ಆಡಳಿತ H-1B ವೀಸಾ ವ್ಯವಸ್ಥೆ ವಂಚನೆಗಾಗಿ ದುರ್ಬಳಕೆ ಎಂದು ಟ್ರಂಪ್ ಆಡಳಿತ ಆರೋಪ

28

ವಾಷಿಂಗ್ಟನ್‌ ಡಿಸಿ: ಟ್ರಂಪ್‌ ಸುಂಕ ಸಮರದ ವಿರುದ್ಧ ಅಮೆರಿಕನ್ನರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಅಮೆರಿಕಕ್ಕೆ ಬರುವ ವಿದೇಶದ ವಿಶೇಷ ಪ್ರತಿಭೆಯುಳ್ಳ ಜನರ ಹರಿವಿಗೆ ಕಡಿವಾಣ ಹಾಕಲು H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ ನಿರ್ಧಾರ ಸರಿಯಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಎಚ್‌-1ಬಿ ವೀಸಾಗಳಿಗೆ 100,000 ಡಾಲರ್‌ ಶುಲ್ಕ ನೀತಿಯನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಈ ಕುರಿತು ಗುರುವಾರ ಶ್ವೇತಭವನದಲ್ಲಿ ಮಾತನಾಡಿದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್, ಆಡಳಿತವು ಈ ಕಾನೂನು ಸವಾಲುಗಳನ್ನು ಎದುರಿಸಲಿದೆ. H-1B ವೀಸಾ ವ್ಯವಸ್ಥೆಯನ್ನು ಹಲವು ವರ್ಷಗಳಿಂದ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಹೊಸ ನೀತಿಯು ಅಮೆರಿಕಾದ ಕಾರ್ಮಿಕರನ್ನು ರಕ್ಷಿಸುವ ಗುರಿ ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಮಿಕರರಿಗಾಗಿ H-1B ವೀಸಾ ನಿರ್ಧಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಈ ದಾವೆಗಳನ್ನು ನ್ಯಾಯಾಲಯದಲ್ಲಿ ಎದುರಿಸಲಿದೆ.

ಅಧ್ಯಕ್ಷರ ಪ್ರಮುಖ ಆದ್ಯತೆ ಯಾವಾಗಲೂ ಅಮೆರಿಕನ್ ಕಾರ್ಮಿಕರಿಗೆ ಮೊದಲ ಸ್ಥಾನ ನೀಡುವುದು ಮತ್ತು ನಮ್ಮ ವೀಸಾ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ದೀರ್ಘಕಾಲದಿಂದ ಎಚ್‌ 1ಬಿ ವೀಸಾ ವ್ಯವಸ್ಥೆಯು ವಂಚನೆಯಿಂದ ತುಂಬಿಹೋಗಿದೆ, ಇದು ಅಮೆರಿಕ ವೇತನವನ್ನು ಕುಗ್ಗಿಸಿದೆ. ಹಾಗಾಗಿ ಈ ವ್ಯವಸ್ಥೆಯನ್ನು ಸುಧಾರಿಸಲು ಬಯಸುತ್ತಾರೆ, ಅದಕ್ಕಾಗಿಯೇ ಈ ಹೊಸ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಈ ಕ್ರಮಗಳು ಕಾನೂನುಬದ್ಧ ಮತ್ತು ಅವಶ್ಯಕವಾಗಿದ್ದು, ನಾವು ಈ ಹೋರಾಟವನ್ನು ನ್ಯಾಯಾಲಯದಲ್ಲಿ ಮುಂದುವರಿಸುತ್ತೇವೆ, ಎಂದು ಲೆವಿಟ್ ವರದಿಗಾರರಿಗೆ ತಿಳಿಸಿದರು.

H-1B ವೀಸಾ: ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, 1 ಲಕ್ಷ ಡಾಲರ್‌ ಶುಲ್ಕದಿಂದ ವಿನಾಯಿತಿ! ಟ್ರಂಪ್ ಆಡಳಿತದ ಈ ನಿರ್ಧಾರವನ್ನು ಯುಎಸ್ ಚೇಂಬರ್ ಆಫ್ ಕಾಮರ್ಸ್ ಕಾನೂನುಬಾಹಿರ ಎಂದು ಕರೆದಿದ್ದಾರೆ. ಜೊತೆಗೆ, ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು ಮತ್ತು ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಹಲವಾರು ಇತರ ಗುಂಪುಗಳು ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ಡಿಸಿಯ ಫೆಡರಲ್ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿವೆ. ಈ ಹೊಸ ಶುಲ್ಕವು ವಲಸೆ ಕಾನೂನನ್ನು ಉಲ್ಲಂಘಿಸುತ್ತದೆ.

ಅಮೆರಿಕದ ಕೈಗಾರಿಕೆಗಳಿಗೆ ಹಾನಿ ಮಾಡುತ್ತದೆ ಎಂದು ಈ ಸಂಘಟನೆಗಳು ವಾದಿಸಿವೆ. H-1B ವೀಸಾ ಎಂದರೆ ಏನು? ಅಮೆರಿಕದಲ್ಲಿ ಕೆಲಸ ಮಾಡಲು ವಿದೇಶಿ ನುರಿತ ಕಾರ್ಮಿಕರಿಗೆ ನೀಡುವ ವೀಸಾ. ಈ ವೀಸಾವನ್ನು ಹೆಚ್ಚಾಗಿ ಭಾರತೀಯ ಐಟಿ ವೃತ್ತಿಪರರು ಬಳಸುತ್ತಾರೆ. ಈಗಿನ ಹೊಸ ನಿಯಮದ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಕಂಪನಿಗಳು $100,000 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಇದು ವೀಸಾ ಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಈ ಶುಲ್ಕವನ್ನು ಹೆಚ್ಚಾಗಿ ದೊಡ್ಡ ಕಂಪನಿಗಳು ಪಾವತಿಸಬೇಕಾಗುತ್ತದೆ.

ಈ ನೀತಿಯಿಂದಾಗಿ ಭಾರತೀಯ ಪ್ರತಿಭೆಗಳಿಗೆ ಅನುಕೂಲವಾಗಬಹುದು ಅಥವಾ ನಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ನೀತಿಯು ಅಮೆರಿಕಾದ ಕಾರ್ಮಿಕರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲು ಮತ್ತು ಅವರ ವೇತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಆಡಳಿತ ಹೇಳುತ್ತಿದೆ. ಆದರೆ, ಉದ್ಯಮಗಳು ಮತ್ತು ಕೆಲವು ಸಂಘಟನೆಗಳು ಈ ನೀತಿಯು ಅಮೆರಿಕಾದ ಆರ್ಥಿಕತೆಗೆ ಹಾನಿ ಮಾಡುತ್ತದೆ ಎಂದು ವಾದಿಸುತ್ತಿವೆ.”

Leave a comment

Leave a Reply

Your email address will not be published. Required fields are marked *

Related Articles

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಟಿಸಿಎಸ್ ನಲ್ಲಿ ಕಾರ್ಪೊರೇಟ್ ಜಿಹಾದ್ ಲೈಂಗಿಕ ಕಿರುಕುಳ ಪ್ರಕರಣ ಬುರ್ಖಾ ಧರಿಸುವಂತೆ ಕಿರುಕುಳ ಹಿಂದೂ ಧರ್ಮ ನಿಂದನೆ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೋಟಕ್ಕೆ ಸಂಚು ನಾಲ್ವರು ಉಗ್ರರ ಬಂಧನ ತಪ್ಪಿದ ಬಾರಿ ದುರಂತ

“ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಮಹಾಸ್ಫೋಟಕ್ಕೆ ಸಂಚು ನಡೆದಿದೆ. ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು...