ಬೆಂಗಳೂರು ಸುತ್ತಮುತ್ತಲಿನ ಮೂರು ಜಿಲ್ಲೆಗಳ 6.5 ಲಕ್ಷ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಲಭ್ಯ

44

ಬೆಂಗಳೂರು : ಬೆಂಗಳೂರಿನಲ್ಲಿರುವ 8.2 ಲಕ್ಷ ಆಸ್ತಿಗಳಲ್ಲಿ ಸುಮಾರು 2.8 ಲಕ್ಷ ಆಸ್ತಿಗಳು ಇ-ಖಾತಾ ಪಡೆಯಲು ಅರ್ಹ ಬೆಂಗಳೂರು ಗ್ರಾಮಾಂತರದ 1.8 ಲಕ್ಷ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ 1.8 ಲಕ್ಷ ಆಸ್ತಿಗಳಿಗೆ ಇ-ಖಾತೆ ರಾಜ್ಯಾದ್ಯಂತ ಒಟ್ಟು 95 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿಗೆ ಕಾನೂನು ದಾಖಲೆ ಒದಗಿಸುವ ಗುರಿ ಇ-ಖಾತಾ ಅಭಿಯಾನ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಇ-ಸ್ವತ್ತು’ ಯೋಜನೆಯಡಿಯಲ್ಲಿ, ಬೆಂಗಳೂರು ಸುತ್ತಮುತ್ತಲಿನ ಮೂರು ಜಿಲ್ಲೆಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 6.5 ಲಕ್ಷ ಅನಧಿಕೃತ ಆಸ್ತಿಗಳ ಮಾಲೀಕರಿಗೆ ಇ-ಖಾತಾ ಲಭ್ಯವಾಗಲಿದೆ. ರಾಜ್ಯಾದ್ಯಂತ 95 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿಗೆ ಕಾನೂನು ದಾಖಲೆ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದತ್ತಾಂಶದ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2.8 ಲಕ್ಷ, ಬೆಂಗಳೂರು ಗ್ರಾಮಾಂತರದಲ್ಲಿ 1.8 ಲಕ್ಷ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 1.8 ಲಕ್ಷ ಆಸ್ತಿಗಳು ‘ಇ-ಸ್ವತ್ತು’ ಕಾರ್ಯಕ್ರಮದಡಿ ಇ-ಖಾತಾ ಪಡೆಯಲು ಅರ್ಹವಾಗಿವೆ. ಕಳೆದ ವಾರ ಈ ಉಪಕ್ರಮಕ್ಕೆ ಸರ್ಕಾರ ಚಾಲನೆ ನೀಡಿದ್ದು, ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಇ-ಖಾತಾ ನೀಡುವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಇ-ಸ್ವತ್ತು ಪೋರ್ಟಲ್‌ ಮೂಲಕ 15 ದಿನಗಳ ಒಳಗಾಗಿ ಆಸ್ತಿದಾರರಿಗೆ ಇ- ಖಾತೆ ನೀಡಲು ಉದ್ದೇಶಿಸಲಾಗಿದೆ.

ಜಿಲ್ಲಾವಾರು ಆಸ್ತಿಗಳ ವಿವರ: ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8.2 ಲಕ್ಷ ಆಸ್ತಿಗಳಿವೆ. ಇವುಗಳಲ್ಲಿ ಸುಮಾರು 5.4 ಲಕ್ಷ ಆಸ್ತಿಗಳು ಈಗಾಗಲೇ ಇ-ಖಾತಾ ಹೊಂದಿವೆ. ಉಳಿದ 2,77,317 ಆಸ್ತಿಗಳನ್ನು ಸಕ್ರಮಗೊಳಿಸಲು ಇಲಾಖೆ ಪಟ್ಟಿ ಮಾಡಿದೆ. ಇದರಿಂದ ಈ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬಂದು ಸರ್ಕಾರದ ಆದಾಯ ಸಂಗ್ರಹ ಹೆಚ್ಚಾಗಲಿದೆ. ಬೆಂಗಳೂರು ನಗರದ ಉತ್ತರ-ಪೂರ್ವ, ಉತ್ತರ ಮತ್ತು ವಾಯುವ್ಯ ಭಾಗಗಳನ್ನು ಒಳಗೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಈ ಪೈಕಿ 2.2 ಲಕ್ಷ ಆಸ್ತಿಗಳು ಇ-ಖಾತಾ ಹೊಂದಿವೆ ಮತ್ತು 1.8 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇ-ಖಾತಾ ಪಡೆಯಲು ಅರ್ಹವಾಗಿವೆ.

ಇನ್ನು ಬೆಂಗಳೂರು ನಗರದ ದಕ್ಷಿಣ ಮತ್ತು ನೈಋತ್ಯ ಭಾಗಗಳಲ್ಲಿ ಗಡಿಯನ್ನು ಹೊಂದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 3.4 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಕೇವಲ 1.5 ಲಕ್ಷ ಆಸ್ತಿಗಳು ಇ-ಖಾತಾ ಹೊಂದಿವೆ. ಉಳಿದ ಆಸ್ತಿಗಳಿಗೆ ಇ-ಖಾತಾ ನೀಡಲಾಗುವುದು. ಗ್ರಾಮ ಪಂಚಾಯತಿ ಇ-ಸ್ವತ್ತು: ಫಾರ್ಮ್ 9, ಫಾರ್ಮ್ 11 ಎಂದರೇನು?, ಪಡೆಯುವುದು ಹೇಗೆ?, ಅರ್ಜಿ ಸಲ್ಲಿಕೆಗೆ ಏನೆಲ್ಲಾ ಬೇಕು? ಇಲ್ಲಿದೆ ವಿವರ ಇ-ಖಾತಾ ಏಕೆ ಮುಖ್ಯ? ಕಳೆದ ಒಂದು ವರ್ಷದಿಂದ ಆಸ್ತಿ ನೋಂದಣಿ ಸೇರಿದಂತೆ ಎಲ್ಲಾ ಆಸ್ತಿ ವಹಿವಾಟುಗಳಿಗೆ ರಾಜ್ಯ ಸರ್ಕಾರ ಇ-ಖಾತಾವನ್ನು ಕಡ್ಡಾಯಗೊಳಿಸಿದೆ. ಇದರ ಜೊತೆಗೆ, ಆಸ್ತಿ ಮಾಲೀಕರು ಆಸ್ತಿಯ ಮೇಲೆ ಬ್ಯಾಂಕ್ ಸಾಲಗಳನ್ನು ಪಡೆಯಲು ಸಹ ಇ-ಖಾತಾ ಪಡೆಯುವುದು ಅನಿವಾರ್ಯವಾಗಿದೆ.

ಗ್ರಾಮ ಪಂಚಾಯತಿಗಳಿಗೆ ಆದಾಯ ಹೆಚ್ಚಳ ‘ಇ-ಸ್ವತ್ತು’ ಉಪಕ್ರಮವು ಆಸ್ತಿ ಮಾಲೀಕರಿಗೆ ಇ-ಖಾತಾ ಪಡೆಯಲು ಸಹಾಯ ಮಾಡುವುದಲ್ಲದೆ, ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದರಿಂದ ಗ್ರಾಮ ಪಂಚಾಯಿತಿಗಳಿಗೂ ಸಹ ಪ್ರಯೋಜನವಾಗಲಿದೆ. 2024-25ರಲ್ಲಿ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಲಾದ ತೆರಿಗೆ 1,272 ಕೋಟಿ ರೂ. ಇತ್ತು. ‘ಇ-ಸ್ವತ್ತು’ ಉಪಕ್ರಮದಡಿಯಲ್ಲಿ ಇದು ಕನಿಷ್ಠ 2,000 ಕೋಟಿ ರೂ. ತಲುಪುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ ಎಂದು ಮೂಲಗಳು ಹೇಳಿವೆ. ”

Leave a comment

Leave a Reply

Your email address will not be published. Required fields are marked *

Related Articles

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...