ಪಿಎಂ ಸ್ವನಿಧಿ ಯೋಜನೆ : ರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆ

30

ಇಲ್ಲಿದೆ ಟಾಪ್‌ 10 ಜಿಲ್ಲೆಗಳ ಪಟ್ಟಿ ಪಿಎಂ ಸ್ವನಿಧಿ ಯೋಜನೆಯಡಿ ಉಡುಪಿ ಜಿಲ್ಲೆ ಮೂರು ಕಂತಿನ ಸಾಲ ವಿತರಣೆಯಲ್ಲಿ ಶೇಕಡಾ 132.29ರಷ್ಟು ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಒಟ್ಟು 4,843 ಮಂದಿಗೆ ಮೊದಲ ಕಂತು, 2,926 ಮಂದಿಗೆ ಎರಡನೇ ಕಂತು ಮತ್ತು 1,026 ಮಂದಿಗೆ ಮೂರನೇ ಕಂತಿನ ಸಾಲವನ್ನು ವಿತರಿಸಲಾಗಿದೆ. ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವ್ಯವಹಾರದ ಪ್ರೋತ್ಸಾಹಧನವನ್ನೂ ನೀಡಲಾಗಿದೆ.

ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯಡಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ ಉಡುಪಿ ಜಿಲ್ಲೆ ಮೂರು ಕಂತುಗಳ ಸಾಲ ನೀಡುವ ಗುರಿಯಲ್ಲಿ ಶೇ. 132.29ರ ಸಾಧನೆ, 4,843 ಜನರಿಗೆ 10,000 ರೂ. ಸಾಲ ವಿತರಣೆ 2,926 ಜನರಿಗೆ 20,000 ರೂ. ಸಾಲ, 1,026 ಜನರಿಗೆ 50,000 ರೂ. ಸಾಲ ವಿತರಣೆ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ವ್ಯವಹಾರದ ಜೊತೆಗೆ ಡಿಜಿಟಲ್ ವ್ಯವಹಾರ ಕಲಿಸುತ್ತಿರುವ ಪಿಎಂ ಸ್ವನಿಧಿ ಯೋಜನೆ ಪಿಎಂ ಸ್ವನಿಧಿ ಯೋಜನೆಯಡಿ ಮೂರು ಕಂತಿನ ಸಾಲ ಒದಗಿಸುವಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ ಉಡುಪಿ ಜಿಲ್ಲೆಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯಡಿ ಉಡುಪಿ ಜಿಲ್ಲೆ ಮೂರು ಕಂತಿನ ಸಾಲ ಒದಗಿಸುವಲ್ಲಿ (ಶೇ. 132.29) ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ.

ಉಡುಪಿ ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2,18,575 ಜನಸಂಖ್ಯೆಯಿದ್ದು, ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಕಂತಿನ 10 ಸಾವಿರ ರೂ. ಸಾಲವನ್ನು ಈ ತನಕ ಒಟ್ಟು 4,812 ಜನರಿಗೆ ನೀಡುವ ಗುರಿಗೆ ಪ್ರತಿಯಾಗಿ 4,843 ಮಂದಿಗೆ ವಿತರಿಸಲಾಗಿದೆ (ಶೇ. 102).

ಎರಡನೇ ಕಂತಿನ 20 ಸಾವಿರ ರೂ. ಸಾಲವನ್ನು 3,357 ಜನರಿಗೆ ನೀಡುವ ಗುರಿಗೆ ಪ್ರತಿಯಾಗಿ 2,926 ಮಂದಿಗೆ (ಶೇ. 98) ಹಾಗೂ ಮೂರನೇ ಕಂತಿನ 50 ಸಾವಿರ ರೂ. ಸಾಲವನ್ನು 1,672 ಜನರಿಗೆ ನೀಡುವ ಗುರಿಗೆ ಪ್ರತಿಯಾಗಿ 1,026 ಮಂದಿಗೆ (ಶೇ. 95) ವಿತರಿಸಿದ್ದು ಒಟ್ಟಾರೆಯಾಗಿ ಶೇ. 132.29 ಸಾಧನೆ ಮಾಡಿದೆ. 3,288 ಬೀದಿ ವ್ಯಾಪಾರಿಗಳು ಡಿಜಿಟಲ್ ವ್ಯವಹಾರದಲ್ಲಿ ತೊಡಗಿದ್ದಾರೆ.

ತಲಾ 10 ಸಾವಿರ ರೂ.ನಂತೆ ಒಟ್ಟು 4.85 ಕೋಟಿ ರೂ. ಸಾಲ ವಿತರಿಸಿ, 0.14 ಕೋಟಿ ರೂ. ಬಡ್ಡಿ ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಡಿಜಿಟಲ್ ವ್ಯವಹಾರದಿಂದ 0.21 ಕೋಟಿ ರೂ. ಕ್ಯಾಶ್‌ ಬ್ಯಾಕ್ ಪಡೆದಿದ್ದಾರೆ. ತಲಾ 20 ಸಾವಿರ ರೂ.ನಂತೆ ಒಟ್ಟು 5.85 ಕೋಟಿ ರೂ. ಸಾಲ ವಿತರಿಸಿದ್ದು, 20 ಲಕ್ಷ ರೂ. ಕ್ಯಾಶ್ ಬ್ಯಾಕ್ ದೊರೆತಿದೆ. ತಲಾ 50 ಸಾವಿರ ರೂ.ನಂತೆ 5.07 ಕೋಟಿ ರೂ. ಸಾಲ ವಿತರಿಸಿದ್ದು, 0.18 ಲಕ್ಷ ರೂ. ಕ್ಯಾಶ್‌ ಬ್ಯಾಕ್ ಪಡೆದಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...

ಅಲ್ಪಸಂಖ್ಯಾತರ ಸಾಲದ ಬಡ್ಡಿ ಮನ್ನಾ ತುಷ್ಟಿಕರಣದಲ್ಲಿ ತೊಡಗಿಕೊಂಡ ಸರಕಾರದ ವಿರುದ್ಧ:: ಸಿಟಿ ರವಿ ವಾಗ್ದಾಳಿ

“ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ರೈತರು, ಹಿಂದುಳಿದ...