ಕಸ ಎಸೆಯುವವರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ

43

ಕಸದ ಸಮಸ್ಯೆ ನಿವಾರಣೆಗೆ ಅಭಿಯಾನ ಕೈಗೊಳ್ಳಲಾಗುವುದು.  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಮಾಹಿತಿ ನೀಡಿದರು. ಕಸ ಸಂಗ್ರಹ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. ಅನಧಿಕೃತ ಕೇಬಲ್‌ ಸಮಸ್ಯೆ ನಿವಾರಣೆಗೆ ಸಭೆ ನಡೆಯಲಿದೆ. ಕಟ್ಟಡಗಳಿಗೆ ವಿನಾಯಿತಿ ಕುರಿತು ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಮೊದಲು ಬಿಬಿಎಂಪಿ ವ್ಯಾಪ್ತಿ 198 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಬೇಕಾಗಿತ್ತು. ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 368 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಬೇಕು. ಹೀಗಾಗಿ ಕಸದ ವಾಹನಗಳ ಸಂಖ್ಯೆ ಹೆಚ್ಚಿಸುತ್ತೇವೆ ಎಂದರು. 

ಕಸ ಬಿಸಾಡುವವರ ವಿರುದ್ಧ ಪ್ರಕರಣ ದಾಖಲು: ಡಿಕೆಶಿ ಅಲ್ಲಲ್ಲಿ ಕಸದ ಬಿನ್‌ ಅಳವಡಿಸುವ ಬಗ್ಗೆ ಚಿಂತನೆ ಜಿಬಿಎ ಅಡಿ ಕಸದ ವಾಹನ ಹೆಚ್ಚಿಸುವ ಸಾಧ್ಯತೆ ಎಲ್ಲೆಂದರಲ್ಲಿ ಕಸ ಹಾಕಿದ್ರೆ ಬೀಳುತ್ತೆ ಕೇಸ್

ಬೆಂಗಳೂರು: ದಸರಾ ರಜೆ ಹಿನ್ನಲೆಯಲ್ಲಿ ನಗರದೆಲ್ಲೆಡೆ ಕಸದ ಸಮಸ್ಯೆ ಜಾಸ್ತಿಯಾಗಿದ್ದು, ವಿಲೇವಾರಿಗೆ ಅಭಿಯಾನ ಕೈಗೊಳ್ಳಲಾಗುವುದು. ಎಲ್ಲೆಂದರಲ್ಲಿಕಟ್ಟಡ ತ್ಯಾಜ್ಯ ಮತ್ತು ಕಸ ಎಸೆಯುವವರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ವಿಧಾನಸೌಧದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ”ನಗರವನ್ನು ಸ್ವಚ್ಛವಾಗಿಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು,” ಎಂದು ಹೇಳಿದರು.   

”ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬಿನ್‌ ಅಳವಡಿಸುವ ಕುರಿತು ಪಾಲಿಕೆಗಳ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಜನರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು. 1 ಕೋಟಿ ದಂಡ ಸಂಗ್ರಹ: ”ಏಕಬಳಕೆಯ ಪ್ಲಾಸ್ಟಿಕ್‌ ಸೇರಿದಂತೆ ಎಲ್ಲೆಂದರಲ್ಲಿ ಕಸ ಹಾಕುವವರಿಂದ 1 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಜತೆಗೆ ಕಸ ಸಂಗ್ರಹ ವಾಹನಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಈ ಮೊದಲು 198 ವಾರ್ಡ್‌ಗಳಲ್ಲಿಕಸ ಸಂಗ್ರಹಿಸಲಾಗುತ್ತಿತ್ತು.

ಇದೀಗ 368 ವಾರ್ಡ್‌ಗಳಲ್ಲಿಕಸ ಸಂಗ್ರಹಿಸಬೇಕಿದ್ದು, ವಾಹನಗಳ ಸಂಖ್ಯೆಯನ್ನು ಮತ್ತಷ್ಟು ಜಾಸ್ತಿ ಮಾಡಲಾಗುವುದು,” ಎಂದು ಹೇಳಿದರು. ಮನೆಯಲ್ಲಿ ಕಸ ವಿಂಗಡಣೆ ಮಾಡದಿದ್ದರೆ ದಿನವೊಂದಕ್ಕೆ ಸಾವಿರ ರೂ. ದಂಡ: ಬಿಬಿಎಂಪಿ ಆಯುಕ್ತ! ”ನಗರದಾದ್ಯಂತ ಅನಧಿಕೃತವಾಗಿ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಬೆಸ್ಕಾಂಗೆ ಸೇರಿದ ವಿದ್ಯುತ್‌ ಕಂಬಗಳಲ್ಲಿಟಿವಿ ಕೇಬಲ್‌ಗಳು ನೇತಾಡುತ್ತಿದ್ದು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ.

ಸಮಸ್ಯೆ ನಿವಾರಣೆ ಸಂಬಂಧ ಸಚಿವ ಕೆ.ಜೆ.ಜಾಜ್‌ರ್‍ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಡಕ್ಟ್ನೊಳಗೆ ಕೇಬಲ್‌ಗಳನ್ನು ಅಳವಡಿಸಲು ಯಾರೂ ಮುಂದಾಗುತ್ತಿಲ್ಲ,” ಎಂದರು. ”ಸುಪ್ರೀಂಕೋರ್ಟ್‌ ಆದೇಶಕ್ಕೆ ಮುನ್ನ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ 4 ಲಕ್ಷ ಕಟ್ಟಡಗಳಿಗೆ ಒಸಿ, ಸಿಸಿಯಿಂದ ವಿನಾಯಿತಿ ನೀಡುವ ಸಂಬಂಧ ಚರ್ಚಿಸಲು ಅ.8ರಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ’ಎ’ ಮತ್ತು ‘ಬಿ’ ಖಾತಾ ಬಗ್ಗೆಯೂ ಮಾಹಿತಿ ನೀಡಲಾಗುವುದು,” ಎಂದು ಹೇಳಿದರು. ”ಎ ಮತ್ತು ಬಿ ಖಾತಾ ವಿಚಾರದಲ್ಲಿಕ್ರಾಂತಿಕಾರಿ ಕೆಲಸಗಳು ನಡೆದಿವೆ. ಈ ಮೊದಲು ಹೇಗಿತ್ತು, ಏನಾಗಿದೆ ಎಂದು ಇದರ ಬಗ್ಗೆ ಮುಂದಿನ ದಿನಗಳಲ್ಲಿಪಿಪಿಟಿ ತಯಾರಿಸಿ ಪ್ರತಿಯೊಂದರ ಬಗ್ಗೆಯೂ ಮಾಹಿತಿ ನೀಡಲಾಗುವುದು.

ಟೀಕೆ ಮಾಡುವವರಿಗೂ ಉತ್ತರ ನೀಡಲಾಗುವುದು,” ಎಂದು ತಿಳಿಸಿದರು. ಹೊಸಕೋಟೆಯಲ್ಲಿ ಕಾನೂನು ಕ್ರಮ ನಗರದಲ್ಲಿಇತ್ತೀಚೆಗೆ ರಸ್ತೆಬದಿಯಲ್ಲಿಕಸ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಈ ರೀತಿ ಕಸ ಸುರಿಯುವುದು ಅಪರಾಧವಾಗಿದೆ. ಇಂಥವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಕೋಟೆ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಬಿ.ಟಿ ಗೋವಿಂದ್‌ ತಿಳಿಸಿದ್ದಾರೆ. ನಗರದಲ್ಲಿಕಸ ಸುರಿಯುವ ಪ್ರಕರಣಗಳು ಹೆಚ್ಚಾಗಿವೆ. ಸಾರ್ವಜನಿಕರು, ಕೋಳಿ ಅಂಗಡಿ ಮಾಲೀಕರು, ರಸ್ತೆ ಬದಿ ಹೋಟಲ್‌, ಬಿರಿಯಾನಿ ಹೋಟೆಲ್‌, ತರಕಾರಿ, ಹೂವಿನ ಮಂಡಿಯವರು, ಹಲವರು ರಸ್ತೆಯ ಬದಿ ಕಸವನ್ನು ಹಾಕುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು.

ಕಸ ಸುರಿಯುವ ಸಿಕ್ಕಿಬಿದ್ದರೆ ಬಿಎನ್‌ಎಸ್‌ 280 ಕಾಯಿದೆಯಡಿ ಕೇಸು ದಾಖಲಾಗುವುದು. ನಗರ ಹಾಗೂ ನಗರಕ್ಕೆ ಸಂಪರ್ಕಿಸುವ ಯಾವುದೇ ರಸ್ತೆಯಲ್ಲಿಕಸ ಸುರಿಯುವವರನ್ನು ಕಂಡರೆ ಕೂಡಲೆ ಅವರ ವಿರುದ್ಧ ಕಾನೂನು ಕ್ರಮ, ವಾಹನ ಜಪ್ತಿ ಹಾಗೂ ಯಾವುದೇ ಹೋಟೆಲ್‌ ಅಂಗಡಿಯಾಗಿದ್ದರೆ ಅದರ ಪರವಾನಿಗೆ ರದ್ದು ಮಾಡುವ ಮೂಲಕ ಕಾನೂನು ರೀತ್ಯ ಶಿಕ್ಷೆಗೆ ಒಳಪಡಿಸಲಾಗುವುದು.”

Leave a comment

Leave a Reply

Your email address will not be published. Required fields are marked *

Related Articles

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....