ಅಮೆರಿಕದ ಮೂಲದ, ಮಲ್ಟಿನ್ಯಾಷನಲ್ ಕಂಪನಿಯಾದ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಅದರ ಪರಿಣಾಮ, ಆ ಕಂಪನಿಯ ಹೋಂ ಕೇರ್ ಹಾಗೂ ಪರ್ಸನಲ್ ಕೇರ್ ಪ್ರಾಡಕ್ಟ್ ಗಳು ಪಾಕಿಸ್ತಾನದಲ್ಲಿ ಸರಿಯಾಗಿ ಸಿಗುತ್ತಿಲ್ಲ. ಆ ಕಂಪನಿಯ ಜಿಲೆಟ್ ಶೇವಿಂಗ್ ಬ್ಲೇಡ್, ಹೆಡ್ ಆ್ಯಂಡ್ ಶೋಲ್ಡರ್ಸ್ ಶಾಂಪೂ, ಏರಿಯಲ್ ವಾಷಿಂಗ್ ಪೌಡರ್ ಸೇರಿದಂತೆ ಅನೇಕ ಪ್ರಾಡಕ್ಟ್ ಗಳು ಅಲ್ಲಿ ತುಂಬಾನೇ ಜನಪ್ರಿಯ. ಆದರೆ, ಈಗ ಅಲ್ಲಿ ಆ ಕಂಪನಿ ಮುಚ್ಚಿರುವುದರಿಂದ ಆ ಪ್ರಾಡಕ್ಟ್ ಗಳು ಅಲ್ಲಿ ಸಿಗದಂತಾಗಿದೆ.
ಪಾಕಿಸ್ತಾನದ ಮನೆಮಾತಾಗಿರುವ ಅತ್ಯಂತ ಜನಪ್ರಿಯ ಹೋಂ ಕೇರ್, ಸೆಲ್ಫ್ ಕೇರ್ ಬ್ರಾಂಡ್ ಗಳಾದ ಜಿಲೆಟ್ ಶೇವಿಂಗ್ ಕ್ರೀಂ, ಜಿಲೆಟ್ ಶೇವಿಂಗ್ ಬ್ಲೇಡ್, ಹೆಡ್ ಆ್ಯಂಡ್ ಶೋಲ್ಡರ್ ಶಾಂಪೂ, ಏರಿಯಲ್ ವಾಷಿಂಗ್ ಪೌಡರ್ ಇನ್ನು ಸಿಕ್ಕಲ್ಲ. ಅದಕ್ಕೆ ಕಾರಣ – ಈ ಎಲ್ಲಾ ಉತ್ಪನ್ನಗಳನ್ನು ತಯಾರಿಸುವ ಪ್ರೋಕ್ಟರ್ ಆ್ಯಂಡ್ ಗ್ಯಾಂಬಲ್ ಕಂಪನಿ, ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ.
ಅದರ ಪರಿಣಾಮವಾಗಿ, ಈ ಮೇಲೆ ಹೇಳಲಾಗಿರುವ ಎಲ್ಲಾ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಫ್ಯಾಕ್ಟರಿಗಳನ್ನು ಕೂಡಲೇ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ವಾರದ ಹಿಂದೆಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಈಗ ಮಾರುಕಟ್ಟೆಯಲ್ಲಿ ಈ ಕಂಪನಿಯ ಉತ್ಪನ್ನಗಳ ಸರಬರಾಜು ನಿಂತು ಹೋಗಿದೆ. ಅದರ ಪರಿಣಾಮ, ಈ ಬ್ರಾಂಡ್ ಗಳನ್ನೇ ನಂಬಿಕೊಂಡಿದ್ದ ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಪ್ರಾಡಕ್ಟ್ ಗಳು ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ಕಂಪನಿಯು ಪಾಕಿಸ್ತಾನದಿಂದ ಹೊರಹೋಗಲು ನಿರ್ಧರಿಸಿರುವ ಕ್ರಮವನ್ನು ಟೀಕಿಸಿದ್ದಾರೆ. ಲಾಹೋರ್ ನಿವಾಸಿಯಾದ ನದೀಮ್ ಖಾನ್ ಎಂಬಾತ ಟ್ವೀಟ್ ಮಾಡಿ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ಕಂಪನಿ ಪಾಕಿಸ್ತಾನವನ್ನು ಏಕೆ ಬಿಟ್ಟು ಹೋಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಆ ಕಂಪನಿಗೆ 2 ಕೋಟಿ 40 ಲಕ್ಷ ಜನರು ಕಸ್ಟಮರ್ ಗಳು ಪಾಕಿಸ್ತಾನದಲ್ಲಿದ್ದಾರೆ. ಅಂಥ ದೊಡ್ಡ ಪ್ರಮಾಣದ ಕಸ್ಟಮರ್ ಗಳನ್ನು ಬಿಟ್ಟು ಹೋಗುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಅರಾಜಕತೆ, ಆರ್ಥಿಕ ಮುಗ್ಗಟ್ಟು ಮುಂತಾದ ಸಮಸ್ಯೆಗಳಿಂದಾಗಿ ಈಗಾಗಲೇ ಅಲ್ಲಿದ್ದ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು ಕಾಲ್ಕಿತ್ತಿವೆ. ಅವುಗಳಲ್ಲಿ ಮೈಕ್ರೋಸಾಫ್ಟ್, ಶೆಲ್ ಇಂಧನ ಸಂಸ್ಥೆ, ಉಬರ್, ಪಿಫೈಜರ್ (ಔಷಧ ಕಂಪನಿ) ಮುಂತಾದವು ಈಗಾಗಲೇ ಆ ದೇಶವನ್ನು ತೊರೆದಿವೆ. ಈಗ ಅಮೆರಿಕ ಮೂಲದ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ಕೂಡ ಅಲ್ಲಿಂದ ಹೊರ ನಡೆದಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಜಾದಿ ಕ್ರಾಂತಿ! ಪಾಕ್ ಸೇನೆ ವಿರುದ್ಧ ಜನರ ದಂಗೆ, 12 ಬಲಿ, ದಶಕಗಳಲ್ಲೇ ಮಹಾ ಸ್ಫೋಟ: ಪಾಕಿಸ್ತಾನದಿಂದ ಪ್ರತ್ಯೇಕಗೊಳ್ಳುತ್ತಾ POK?
ಕಳಪೆ ಗುಣಮಟ್ಟದ ವಸ್ತುಗಳೇ ಗತಿ!
ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ನಂಥ ಮಲ್ಟಿನ್ಯಾಷನಲ್ ಬ್ರಾಂಡ್ ಹಾಗೂ ಅವುಗಳ ಉತ್ಪನ್ನಗಳು ಪಾಕಿಸ್ತಾನದಿಂದ ಹೊರನಡೆದಿರುವುದರಿಂದ ಅಲ್ಲಿನ ಜನರಿಗೆ ಕಳಪೆ ವಸ್ತುಗಳನ್ನು ಕೊಳ್ಳುವ ಗತಿ ಬಂದಿದೆ. ಉದಾಹರಣೆಗೆ, ಇಸ್ಲಾಮಾಬಾದ್ ನ ನಿವಾಸಿಯಾದ ಇಂಜಿನಿಯರ್ ಜಾವೇದ್ ಇಕ್ಬಾಲ್ ಎಂಬುವರು ಟ್ವೀಟ್ ಮಾಡಿ,”ನನಗೆ ಜಿಲೆಟ್ ಬ್ಲೂ 3 ಮಾದರಿಯ ರೇಜರ್ ಬಳಸಿ ಅಭ್ಯಾಸ. ಅದು ಅತ್ಯಂತ ಉತ್ಕೃಷ್ಟವಾಗಿತ್ತು. ಈಗ ಅದರ ಬ್ಲೇಡ್ ಸಿಕ್ಕುತ್ತಿಲ್ಲ. ಅದರ ಬದಲಿಗೆ ಪಾಕಿಸ್ತಾನದ ಕೆಲವು ಕಂಪನಿಗಳ ಬ್ಲೇಡ್ ಗಳನ್ನು ತಂದು ಬಳಸಿದೆ. ಆದರೆ, ಅವು ಕಳಪೆ ಗುಣಮಟ್ಟದ್ದಾಗಿವೆ” ಎಂದು ತಿಳಿಸಿದ್ದಾರೆ.”

Leave a comment