ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಜಾತಿ ಗಣತಿ ಅಕ್ಟೋಬರ್ 3 ಅಥವಾ 4 ರಿಂದ ಪ್ರಾರಂಭ 17 ಸಾವಿರ ನೌಕರರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದ ಆಯುಕ್ತರು ಪ್ರತಿಯೊಂದು ವಾರ್ಡ್‌ಗೆ 80 – 90 ಮಂದಿ ಗಣತಿದಾರರ ನೇಮಕ, 32 ಲಕ್ಷ ಮನೆಗಳಲ್ಲಿ ಸಮೀಕ್ಷೆ ಬೆಂಗಳೂರು ನಗರದಲ್ಲೂ ಸದ್ಯದಲ್ಲೇ ಜಾತಿ ಗಣತಿ ಆರಂಭವಾಗಲಿದೆ.

ಬೆಂಗಳೂರು: ರಾಜ್ಯದೆಲ್ಲೆಡೆ ಜಾತಿ ಗಣತಿ ಆರಂಭವಾಗಿದ್ದರೂ ಇನ್ನೂ ಗ್ರೇಟರ್ ಬೆಂಗಳೂರು ಪ್ರದೇಶದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಿಲ್ಲ. ಇದೇ ಅಕ್ಟೋಬರ್ 3 ಅಥವಾ 4ರಿಂದ ಗಣತಿ ಆರಂಭವಾಗಲಿದ್ದು, ಈಗಾಗಲೇ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ. ” ಮತದಾರರ ಪಟ್ಟಿ ಪರಿಷ್ಕರಣೆ ಜತೆಗೆ ಸಮೀಕ್ಷೆಗೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ. ಹೀಗಾಗಿ, ಬೇರೆ ಬೇರೆ ಇಲಾಖೆಗಳಿಗೆ ನೋಟಿಸ್ ನೀಡಿ ಸುಮಾರು 17 ಸಾವಿರ ನೌಕರರನ್ನು ಸಮೀಕ್ಷಾ ಕಾರ್ಯಕ್ಕೆ ಪಡೆಯಲಾಗಿದೆ. ಅಕ್ಟೋಬರ್ 3ರಂದು ಅಂತಿಮ ತರಬೇತಿ ನೀಡಿ, ಅದೇ ದಿನ ಸಮೀಕ್ಷೆಗೆ ವಾರ್ಡ್‌ವಾರು ಸಿಬ್ಬಂದಿಯನ್ನು ನಿಯೋಜಿಸಲಾಗುವುದು,” ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

”ಪ್ರತಿಯೊಂದು ವಾರ್ಡ್‌ಗೆ 80 – 90 ಮಂದಿ ಗಣತಿದಾರರನ್ನು ಸಮೀಕ್ಷೆಗೆ ನೇಮಿಸಲಾಗುತ್ತಿದೆ. ನಗರದಲ್ಲಿ 32 ಲಕ್ಷ ಮನೆಗಳಿದ್ದು, ಪ್ರತಿಯೊಬ್ಬ ಗಣತಿದಾರರು 250 ಮನೆಗಳ ಸಮೀಕ್ಷೆ ನಡೆಸಲಿದ್ದಾರೆ. ಗಣತಿದಾರರು ಮನೆಗೆ ಬಂದಾಗ ನಿವಾಸಿಗಳು ಆಧಾರ್, ಪಡಿತರ ಚೀಟಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಬೇಕು,” ಎಂದು ಅವರು ಮನವಿ ಮಾಡಿಕೊಂಡರು. ಜಾತಿ ಗಣತಿ ವರದಿ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್! ಏನಂದ್ರು ಸಿಎಂ? ”ಸಮೀಕ್ಷೆಯನ್ನು 10 ರಿಂದ 15 ದಿನಗಳೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಸೂಕ್ತ ದಾಖಲೆ ಸಲ್ಲಿಸಿದರೆ ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ ನೀಡಲಾಗುವುದು. ಮದುವೆ, ಸಾವಿನ ಪ್ರಕರಣಗಳಲ್ಲೂ ವಿನಾಯಿತಿ ಕೊಡಲಾಗುತ್ತದೆ. ಉಳಿದವರು ಸಮೀಕ್ಷೆಗೆ ಗೈರಾದರೆ, ಶಿಸ್ತು ಕ್ರಮ ಜರುಗಿಸಲಾಗುತ್ತದೆ,” ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಎಚ್ಚರಿಕೆ ನೀಡಿದರು. ”
Leave a comment