ಮೈಸೂರು : ಲೇಖಕ ಡಾ.ಎಸ್‌.ಎಲ್‌. ಭೈರಪ್ಪ ಅವರ ಕರ್ಮಭೂಮಿ

25

“ಎಸ್‌ಎಲ್‌ ಭೈರಪ್ಪಗೆ ವಿದ್ಯೆ ಕಲಿಸಿ, ಸಾಹಿತ್ಯ ಕೃಷಿಗೂ ಪ್ರೇರಣೆ ನೀಡಿದ್ದು ಮೈಸೂರು; ಸಾಹಿತಿಯ ಇಷ್ಟಗಳೇನು? ಲೇಖಕ ಡಾ.ಎಸ್‌.ಎಲ್‌. ಭೈರಪ್ಪ ಅವರ ಕರ್ಮಭೂಮಿ ಮೈಸೂರು. ಅಲ್ಲಿ ಅವರು ವಿದ್ಯಾಭ್ಯಾಸ ಮಾಡಿದರು, ಸಾಹಿತ್ಯ ಕೃಷಿಗೆ ಪ್ರೇರಣೆ ಪಡೆದರು. ಅವರು ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಓದಿದರು, ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದರು.

ಈಜುವುದು, ಕಾರು ಚಾಲನೆ, ಸಂಗೀತ ಆಲಿಸುವುದು ಅವರ ಹವ್ಯಾಸಗಳಾಗಿದ್ದವು. ಕ್ಯಾರೆಟ್‌ ಹಲ್ವ ಎಂದರೆ ಭೈರಪ್ಪರಿಗೆ ಇಷ್ಟದ ಖಾದ್ಯವಾಗಿತ್ತು. ‘ಪರ್ವ’ ಕಾದಂಬರಿಯ ನಾಟಕ ರೂಪ ಮೈಸೂರಿನಲ್ಲಿಯೇ ಸಿದ್ಧವಾಯಿತು.

ಭೈರಪ್ಪ ಕರ್ಮಭೂಮಿ ಮೈಸೂರು 87ರ ಹರೆಯದಲ್ಲೂ ಕಾರು ರೈಡ್‌, ಸ್ವಿಮ್ಮಿಂಗ್‌ ಇಷ್ಟಪಡ್ತಿದ್ದ ಸಾಹಿತಿ ಎಸ್‌ಎಲ್‌ ಭೈರಪ್ಪ ಕಾಂತಾರ ಸಿನಿಮಾ ನೋಡಿದ್ಧ ಭೈರಪ್ಪ, ಕ್ಯಾರೆಟ್‌ ಹಲ್ವ ಅಂದ್ರೆ ಪ್ರೀತಿ ಎಸ್‌ಎಲ್‌ ಭೈರಪ್ಪ ಮೈಸೂರು ನಂಟು ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ಅವರಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಜನ್ಮಭೂಮಿಯಾದರೂ ‘ಸಾಂಸ್ಕೃತಿಕ ನಗರಿ’ ಮೈಸೂರು ಕರ್ಮಭೂಮಿಯಾಗಿತ್ತು.

ವಿದ್ಯೆ ಕಲಿಸಿದ ಮೈಸೂರು ಸಾಹಿತ್ಯ ಕೃಷಿಗೂ ಪ್ರೇರಣೆ ನೀಡಿತು. ಹಾಗಾಗಿ ಎಸ್‌.ಎಲ್‌.ಭೈರಪ್ಪ ಅವರು ಮೈಸೂರಿನಲ್ಲೇ ನೆಲೆ ನಿಂತರು. ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿಎಸ್‌.ಎಲ್‌.ಭೈರಪ್ಪ ವಿದ್ಯಾಭ್ಯಾಸ ಮಾಡಿದರು.

ಬಾಲ್ಯದಲ್ಲೇ ಶರತ್‌ ಚಂದ್ರ, ಅನಕೃ, ದೇವುಡು, ಶಿವರಾಮ ಕಾರಂತರ ಕಾದಂಬರಿ ಹೆಚ್ಚು ಓದುತ್ತಿದ್ದರು. ಮಿಲಿಟರಿ ಸೇರುವ ಆಸಕ್ತಿಯೂ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ತತ್ವಶಾಸ್ತ್ರದಲ್ಲಿಆಸಕ್ತಿ ಇದ್ದ ಕಾರಣ ಇಲ್ಲಿನ ಮಹಾರಾಜ ಕಾಲೇಜಿನಲ್ಲಿ1957ರಲ್ಲಿಬಿಎ ಆನರ್ಸ್‌ ಸೇರಿದರು.

ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿತತ್ವಶಾಸ್ತ್ರದಲ್ಲಿಸ್ನಾತಕೋತ್ತರ ಪದವಿ ಪೂರೈಸಿದರು. ಅಲ್ಲದೆ, ಚಿನ್ನದ ಪದಕವನ್ನೂ ಪಡೆದುಕೊಂಡರು. ಬಳಿಕ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿತತ್ವಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರದ ರೀಡರ್‌ ಆಗಿದ್ದರು. ಹೊಯ್ಸಳ ಕರ್ನಾಟಕ ಸಂಘದಲ್ಲಿಕೂಡ ಇವರು ವಾಸ್ತವ್ಯ ಮಾಡಿದ್ದರು. ಈಗ ಸಂಘದ ಧರ್ಮದರ್ಶಿ, ಮಹಾಪೋಷಕರಾಗಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ರಾಷ್ಟ್ರಗೀತೆಯಂತೆಯೇ ವಂದೇ ಮಾತರಂ ಗೂ ಶಿಷ್ಟಾಚಾರ ಗೌರವ ಎದ್ದು ನಿಂತು ಗೌರವ ನೀಡಲು ಸೂಚನೆ ತಪ್ಪಿದ್ದಲ್ಲಿ ಶಿಕ್ಷೆ ಕೇಂದ್ರ ಸರಕಾರದ ಅಧಿಸೂಚನೆ

ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ...