ಪಿಓಕೆ ಮರುವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ ; ರಾಜನಾಥ ಸಿಂಗ್‌ ಭರವಸೆಯ ನುಡಿ

58

“ಒಂದಲ್ಲ ಒಂದು ದಿನ ಪಾಕ್‌ ಆಕ್ರಮಿತ ಕಾಶ್ಮೀರ ನಾನು ಭಾರತ ಎಂದು ಘೋಷಿಸಿಕೊಳ್ಳುವ ದಿನ ಬಂದೇ ಬರುತ್ತದೆ” ಇದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಭರವಸೆಯ ನುಡಿಗಳು. ಮೊರಾಕ್ಕೊದಲ್ಲಿ ಅನಿವಾಸಿ ಭಾರತೀಯ ಸಮುದಾಯದವರೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪಿಒಕೆ ಮರುವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ, ಅದು ತಾನಾಗಿಯೇ ಭಾರತದ ಅಂಗವಾಗಲಿದೆ” ಎಂದು ಭವಿಷ್ಯ ನುಡಿದರು. ಶಾಂತಿ ಮಾರ್ಗದಲ್ಲೇ ಪಿಒಕೆ ಭಾರತದ ಮರುವಶವಾಗಲಿದೆ ಎಂಬ ರಾಜನಾಥ್‌ ಸಿಂಗ್‌ ಹೇಳಿಕೆ ಇದೀಗ ಗಮನ ಸೆಳೆದಿದೆ.

ಪಿಒಕೆ ತಾನಾಗಿಯೇ ಭಾರತದ ಒಕ್ಕೂಟವನ್ನು ಸೇರಿಕೊಳ್ಳಲಿದೆ ಎಂದ ರಾಜನಾಥ್‌ ಸಿಂಗ್‌. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎರಡು ದಿನಗಳ ಮೊರೊಕ್ಕೊ ಪ್ರವಾಸ. ಪಿಒಕೆ ಒಂದು ದಿನ ʻನಾನು ಭಾರತʼ ಎಂದು ಘೋಷಿಸಿಕೊಳ್ಳಲಿದೆ ಎಂದ ರಾಜನಾಥ್‌ ಸಿಂಗ್.  “ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೇಲೆ, ಭಾರತವು ಶಾಂತಿಯುತವಾಗಿ ಹಿಡಿತ ಸಾಧಿಸಬಹುದು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊರಾಕ್ಕೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಜನರು ಪಾಕ್‌ ಆಡಳಿತದಿಂದ ವಿಮೋಚನೆ ಬಯಸಿದ್ದಾರೆ ಎಂದು ಅಭಿಪ್ರಾಯಪಟ್ಟರು. “ಮುಂದೊಂದು ದಿನ ಪಿಒಕೆ ʻನಾನು ಭಾರತʼ ಎಂದು ಹೇಳುವ ದಿನಗಳು ಬಂದೇ ಬರುತ್ತವೆ. ಅಲ್ಲಿನ ಜನ ಭಾರತದೊಂದಿಗೆ ಸೇರಲು ಕಾತರದಿಂದ ಕಾಯುತ್ತಿದ್ದಾರೆ. ಪಿಒಕೆ ವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ, ಬದಲಿಗೆ ಶಾಂತಿ ಮಾರ್ಗದಲ್ಲೇ ಆ ಪ್ರದೇಶ ತಾನಾಗಿಯೇ ಭಾರತವನ್ನು ಸೇರಿಕೊಳ್ಳುತ್ತದೆ” ಎಂದು ರಾಜನಾಥ್‌ ಸಿಂಗ್‌ ಭವಿಷ್ಯ ನುಡಿದಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2016ರಲ್ಲೇ “ಪಿಒಕೆ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗ” ಎಂದು ಹೇಳಿದ್ದರು.   

Leave a comment

Leave a Reply

Your email address will not be published. Required fields are marked *

Related Articles

ನೀಟ್ ಪರೀಕ್ಷೆ ನಡೆಸುವ ಎನ್ ಟಿಎನಲ್ಲಿ ಮಹತ್ವದ ಬದಲಾವಣೆ 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರಕಾರ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ದೇಶಾದ್ಯಂತ ಹಬ್ಬುತ್ತಿದ್ದಂತೆ ಎಚ್ಚೇತ ಕೇಂದ್ರ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ‘ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ...

ವಂದೇ ಮಾತರಂ’ಗೆ ಅವಮಾನಿಸಿದರೆ 3 ವರ್ಷ ಜೈಲು ಶಿಕ್ಷೆ: ನಾಳೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ನವದೆಹಲಿ: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು,...

ಕುಂಭಮೇಳ ವೈರಲ್ ಯುವತಿ ಮೊನಾಲಿಸಾ ದಂಪತಿಗಳಿಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಹಿಂಪಡೆದುಕೊಂಡ ಕೇರಳ ಹೈ ಕೋರ್ಟ್

“ಕೊಚ್ಚಿ: ಕುಂಭಮೇಳ 2025 ರಲ್ಲಿ ಸಾಕಷ್ಟು ವೈರಲ್‌ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ ಹಾಗೂ ಆಕೆಯ...