ನಾಳೆಯಿಂದ ಪ್ರಾರಂಭವಾಗಲಿದೆ  ಜಾತಿ ಜನಗಣತಿ : ಅ.7ರವರೆಗೂ ನಡೆಯಲಿರುವ ಮೆಗಾ ಸಮೀಕ್ಷೆ

29

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಇದಕ್ಕಾಗಿ 2914 ಗಣತಿದಾರರು ಮತ್ತು 159 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ರಜೆ ಇಲ್ಲ, ಸಾರ್ವತ್ರಿಕ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ.

ಬೆಸ್ಕಾಂನ ವಿದ್ಯುತ್‌ ಮೀಟರ್‌ ರೀಡರ್‌ಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್‌ ಮಾಡುವ ಕಾರ್ಯವೂ ನಡೆದಿದೆ. ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶ ಸಿಗಲಿದೆ. ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿ ಯಾವುದೇ ರಜೆ ಪಡೆಯದಂತೆ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ಸಹ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಸೆ,22 ರಿಂದ ಜಾತಿ ಗಣತಿ ಮಾಡಲು ಶಿಕ್ಷಕರಿಗೆ ಜವಾಬ್ದಾರಿ

ಚಿಕ್ಕಬಳ್ಳಾಪುರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ಶುರುವಾಗುತ್ತಿದೆ. ಜಿಲ್ಲಾದ್ಯಂತ ಮನೆಗಳ ಜಿಯೋ ಟ್ಯಾಗಿಂಗ್‌ ಕಾರ್ಯ ನಡೆದಿದ್ದು, ಗಣತಿದಾರರ ಮತ್ತು ಮೇಲ್ವಿಚಾರಕರಿಗೆ ಸಮೀಕ್ಷೆ ಕುರಿತು 2 ಸುತ್ತಿನ ತರಬೇತಿ ನೀಡಲಾಗಿದೆ. ಈ ಪ್ರತಿ ಮನೆಗೂ ಭೇಟಿ ನೀಡಿ ಜಾತಿ ಜನಗಣತಿ ನಡೆಸಲಿದ್ದಾರೆ. ಆ.23ರಿಂದಲೇ ಪೂರ್ವ ತಯಾರಿ ಪ್ರಕ್ರಿಯೆ ನಡೆದಿತ್ತು. ಸೆ.22ರಿಂದ ಜಾತಿಗಣತಿ ಅಧಿಕೃತವಾಗಿ ಆರಂಭಗೊಂಡು ಸರಕಾರಿ ಶಾಲೆಗಳ ರಜೆ ಮುಗಿಯುವುದರೊಳಗೆ ಅಂದರೆ ಅ.7ರೊಳಗೆ ಜಾತಿ ಜನಗಣತಿ ಮುಗಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಮತ್ತೊಂದೆಡೆ ಬೆಸ್ಕಾಂನ ವಿದ್ಯುತ್‌ ಮೀಟರ್‌ ರೀಡರ್‌ಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್‌ ಮಾಡುವ ಕಾರ್ಯವೂ ನಡೆದಿದೆ.   

ಅ.7ರವರೆಗೂ ಸರ್ವೆ : ಸಮೀಕ್ಷೆ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿಸೆ.22 ರಿಂದ ಅ.7, 2025ರವರೆಗೆ ನಡೆಸುವ ಗುರಿ ಹೊಂದಲಾಗಿದೆ. ಸಮೀಕ್ಷೆ ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ ದತ್ತಾಂಶಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಅಂದಾಜು ರಾಜ್ಯದ 7 ಕೋಟಿ ಜನರಿಗೆ ಸರಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶ ಸಿಗಲಿದೆ. ಹೀಗಾಗಿ ಈ ಬಾರಿಯ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲತಯಾರಿ ನಡೆದಿದೆ.

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...