ಲಾರಿ ಚಾಲಕನ ಬೇಜಾಬ್ದಾರಿ ಚಾಲನೆ ರಸ್ತೆ ಅಪಘಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಶಿಕ್ಷಕ ಸಂತೋಷ್

13

ಆ.8 ರಂದು ತೆಕ್ಕಟ್ಟೆಯಿಂದ ಕೋಟ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಕೋಟ ಮಣೂರಿನಲ್ಲಿ

ಬೈಕ್ ಗೆ ಹಿಂದಿನಿಂದ ಬಂದ ಲಾರಿಯೊಂದು‌ ಡಿಕ್ಕಿ‌ ಹೊಡೆದ ಪರಿಣಾಮ‌ ಬೈಕ್ ಸವಾರ ಸಂತೋಷ್ ರಸ್ತೆಗೆ ಬಿದ್ದು ತಲೆ ಮತ್ತು ಮುಖ ಕೈಗಳಿಗೆ ಗಂಭೀರ ಸ್ವರೂಪದ‌ ಗಾಯಗಳಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಂತೋಷ್ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ವಿವಿಧ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಕೋಟ ಪಡುಕೇರಿ ಪರಿಸರದಲ್ಲಿ ಜನನುರಾಗಿರುವ ಸೌಮ್ಯ ಸ್ವಭಾವಿ ಸಾಹಿತಿ ಕವಿ ಸಂಘಟಕ ಶಿಕ್ಷಕ ಸಂತೋಷ ನಿಧನ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇವರಿಗೆ ಹೆಣ್ಣು ಮಗುವಾಗಿದ್ದು ಮಗುವಿನ ನಾಮಕರಣಕ್ಕೂ ಮೊದಲೇ ಈ ಘಟನೆ ನೆಡೆದಿದ್ದು ಬಹಳ ನೋವಿನ ಸಂಗತಿಯಾಗಿದೆ

ಮೃತರು ಹೆಂಡತಿ ಹಾಗೂ ಒಂದು ತಿಂಗಳ ಮಗು ತಾಯಿ ಸಹೋದರರು ಹಾಗೂ ತನ್ನ ಆಪಾರ ಅಭಿಮಾನಿಗಳನ್ನು ಅಗಲಿದ್ದಾರೆ ದಲಿತ ಸಂಘಟನೆ ಯ ಸಕ್ರಿಯ ಸದಸ್ಯ ರಾಗಿರುವ ಇವರ ನಿಧನ ಸುದ್ದಿಗೆ ಜಿಲ್ಲಾ ದಲಿತ ಸಂಘರ್ಷಸಮಿತಿ (ಅಂಬೇಡ್ಕರ್ ವಾದ ) ಇದರ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರ್ ಮತ್ತು ಪದಾಧಿಕಾರಿಗಳು

ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ. ಗೋಪಾಲಕೃಷ್ಣ ನಾಡತೀವ್ರ ಸಂತಾಪ ಸೂಚಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೊರಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ 2010ರಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಎಸ್ ಐ ಟಿ ಗೆ ದೂರುದಾಖಲು

ಮಂಗಳೂರು: ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ)...

ದಲಿತ ಸಂಘರ್ಷ ಸಮಿತಿ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

79ನೇ ಸ್ವತಂತ್ರೋತ್ಸವದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಮನಗರ ಮತ್ತು ಫ್ರೆಂಡ್ಸ್ ರಾಮನಗರ...

ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ, ಮಧುಮೇಹ ರಕ್ತದೊತ್ತಡ ತಪಾಸಣೆ ದಂತ ತಪಾಸಣಾ  ಶಿಬಿರ

ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ರೋಟರಿ ಕ್ಲಬ್ ಪಡುಬಿದ್ರಿ, ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ...

ಹೆಬ್ರಿ ದೇವಸ್ಥಾನದ ಆಡಳಿತ ಮುಖ್ಯಸ್ಥರಿಗೆ ದೇವಸ್ಥಾನಕ್ಕೆ ಬರದಂತೆ ತಡೆದು ಜೀವ ಬೆದರಿಕೆ

ನಾಡ್ಪಾಲು ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ  ಅನುವಂಶಿಕ ಆಡಳಿತ ಮುಖ್ಯಸ್ಥರಾಗಿ ಕುಟುಂಬ ಸಮೇತ ದೇವಸ್ಥಾನಕ್ಕೆ ಪ್ರವೇಶ...