ರೌಂಡ್-ಟ್ರಿಪ್ ಪ್ಯಾಕೇಜ್ ಶೇ 20ರಷ್ಟು ರಿಯಾಯಿತಿ ಘೋಷಿಸಿದ ರೈಲ್ವೆ ಇಲಾಖೆ

2

“ರೈಲ್ವೆ ಸಚಿವಾಲಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ, ರಿಟರ್ನ್ ಪ್ರಯಾಣ ಟಿಕೆಟ್‌ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ ಶೇ. 20 ರಷ್ಟು ರಿಯಾಯಿತಿ ನೀಡುವ ರೌಂಡ್-ಟ್ರಿಪ್ ಪ್ಯಾಕೇಜ್ ಘೋಷಿಸಿದೆ.
ಈ ಯೋಜನೆ ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಫ್ಲೆಕ್ಸಿ-ಫೇರ್ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುವ ರಾಜಧಾನಿ, ಡುರೊಂಟೊ ಮತ್ತು ಶತಾಬ್ದಿ ರೈಲುಗಳನ್ನು ಹೊರತುಪಡಿಸಿ, ಇತರ ಎಲ್ಲಾ ಕಾಯ್ದಿರಿಸಿದ ರೈಲುಗಳಲ್ಲಿ ಹೋಗಿ ಬರುವ ಎರಡೂ ಟಿಕೆಟ್ ಒಟ್ಟಿ ಬುಕ್ ಮಾಡಿದರೆ ಟಿಕೆಟ್ ದರದಲ್ಲಿ ಶೇ. 20 ರಷ್ಟು ರಿಯಾಯಿತಿ ಲಭ್ಯವಿದೆ.

ಈ ಯೋಜನೆ ಅಡಿ ಬುಕಿಂಗ್ ಆಗಸ್ಟ್ 14 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಆದರೆ ಯೋಜನೆ ಅಡಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವಾಲಯ ಶನಿವಾರ ತಿಳಿಸಿದೆ.

ಶುಕ್ರವಾರ ಸಂಜೆ ಹೊರಡಿಸಲಾದ ವಾಣಿಜ್ಯ ಸುತ್ತೋಲೆಯ ಪ್ರಕಾರ, ಜನದಟ್ಟಣೆಯನ್ನು ತಪ್ಪಿಸಲು, ತೊಂದರೆ-ಮುಕ್ತ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು, ಹಬ್ಬದ ಋತುವಿನಲ್ಲಿ ಗರಿಷ್ಠ ದಟ್ಟಣೆಯನ್ನು ಮರುಹಂಚಿಕೆ ಮಾಡಲು ಮತ್ತು ವಿಶೇಷ ರೈಲುಗಳು ಸೇರಿದಂತೆ ರೈಲುಗಳ ಎರಡೂ ಮಾರ್ಗಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ರೂಪಿಸಲಾಗಿದೆ. ‘

ರೌಂಡ್-ಟ್ರಿಪ್ ಪ್ಯಾಕೇಜ್’ (RTP) ಎಂದು ಹೆಸರಿಸಲಾದ ಈ ಯೋಜನೆಯು ಅಕ್ಟೋಬರ್ 13 ರಿಂದ ಅಕ್ಟೋಬರ್ 26 ರವರೆಗಿನ ಪ್ರಯಾಣಕ್ಕಾಗಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅದೇ ರೈಲಿನಲ್ಲಿ ನವೆಂಬರ್ 17 ರಿಂದ ಡಿಸೆಂಬರ್ 1 ರವರೆಗೆ ಹಿಂದಿರುಗುವ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ.
ಆಗಸ್ಟ್ 14 ರಿಂದ ಬುಕ್ ಮಾಡಿದ ಟಿಕೆಟ್‌ಗಳಿಗೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊದಂತಹ ಫ್ಲೆಕ್ಸಿ-ಫೇರ್ ರೈಲುಗಳಲ್ಲಿ ಅಥವಾ ಫ್ಲೆಕ್ಸಿ-ಫೇರ್ ವ್ಯವಸ್ಥೆಯನ್ನು ಹೊಂದಿರುವ ಇತರ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ

Leave a comment

Leave a Reply

Your email address will not be published. Required fields are marked *

Related Articles

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸಿದ ರಾಜ್ಯ  ಶಿಕ್ಷಣ ಇಲಾಖೆ

“ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು...

ಮಹಾಕುಂಭಮೇಳದಲ್ಲಿ ಮಾಘ ಸ್ನಾನಕ್ಕೆ ಆಗಮಿಸಲಿರುವ 73 ದೇಶಗಳ ರಾಜ ತಾಂತ್ರಿಕ ರಾಯಭಾರಿಗಳು

“ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದ...

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ ‘ಪ್ರಾಣ...

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು :: ಆರೂರು ಸುಕೇಶ್ ಶೆಟ್ಟಿ ನ್ಯಾಯವಾದಿ, ಉಡುಪಿ.

ವಕೀಲರ ದಿನಾಚರಣೆಯ ಶುಭಾಶಯಗಳು ವಿಶೇಷ ಸಂಚಿಕೆ ಬರಹ ::ಅರೂರು ಸುಕೇಶ್ ಶೆಟ್ಟಿ ಗೆಲ್ಲುವ ಪ್ರಕರಣಗಳ ಸಂಖ್ಯೆಯ...