ಅಪ್ಪ, ಮಗನ ಜಗಳ ಬಿಡಿಸಲು ಬಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಬರ್ಬರ ಹತ್ಯೆ ಆರೋಪಿಗಳಿಗಾಗಿ ಶೋಧ

89

ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ಗುಡಿಮಂಗಲಂನಲ್ಲಿ ಅಪ್ಪ ಮತ್ತು ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪೊಲೀಸ್ ಇಲಾಖೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆಗಸ್ಟ್ 5 ರಂದು ರಾತ್ರಿ 11 ಗಂಟೆ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ತಿರುಪ್ಪುರು ಜಿಲ್ಲೆಯ ಗುಡಿಮಂಗಲಂ ಪೊಲೀಸ್ ಠಾಣೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ಎಂ. ಷಣ್ಮುಗವೇಲ್(57) ಮತ್ತು ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಅಳಗುರಾಜ, ಇಬ್ಬರು ವ್ಯಕ್ತಿಗಳು ಕುಡಿದು ಜಗಳವಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ತೆರಳಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಪೊಲೀಸ್ ಅಧಿಕಾರಿಯ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಕಾನ್‌ಸ್ಟೆಬಲ್ ನನ್ನು ಓಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಟಿ. ಸೆಂಥಿಲ್ ಕುಮಾರ್ ಅವರ ಪ್ರಕಾರ, ಕುಟುಂಬದೊಳಗೆ ಜಗಳವಿತ್ತು. ಗಸ್ತು ಕರ್ತವ್ಯದಲ್ಲಿದ್ದ ಎಸ್‌ಎಸ್‌ಐ ಷಣ್ಮುಗವೇಲ್ ಮತ್ತು ಕಾನ್‌ಸ್ಟೆಬಲ್ ಅಳಗುರಾಜ ಅವರು ಸಂಘರ್ಷವನ್ನು ಶಮನಗೊಳಿಸಲು ಉಡುಮಲ್‌ಪೇಟೆ ಬಳಿಯ ಜಮೀನಿಗೆ ತೆರಳಿದ್ದರು.

ಈ ವೇಳೆ ಮಣಿಗಂದನ್ ಎಂಬ ವ್ಯಕ್ತಿ ಎಸ್‌ಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರ ಸಹೋದರ ತಂಗಪಾಂಡ್ಯನ್ ಮತ್ತು ಅವರ ತಂದೆ ಮೂರ್ತಿ ಕೂಡ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕಾನ್‌ಸ್ಟೆಬಲ್ ನನ್ನು ಓಡಿಸಿದ್ದಾರೆ ಅವರು ಹೇಳಿದ್ದಾರೆ.
ಎಸ್‌ಎಸ್‌ಐ ಷಣ್ಮುಗವೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾನ್‌ಸ್ಟೆಬಲ್ ಜೀವ ಬೆದರಿಕೆಯಿಂದ ಪಾರಾಗಿದ್ದಾರೆ. ಮೂರ್ತಿ ಮತ್ತು ಅವರ ಇಬ್ಬರು ಪುತ್ರರಾದ ಮಣಿಗಂದನ್ ಮತ್ತು ತಂಗಪಾಂಡಿ ವಿರುದ್ಧ ತಲಾ ನಾಲ್ಕು ಪ್ರಕರಣಗಳಿದ್ದು, ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಐಜಿಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ನೀಟ್ ಪರೀಕ್ಷೆ ನಡೆಸುವ ಎನ್ ಟಿಎನಲ್ಲಿ ಮಹತ್ವದ ಬದಲಾವಣೆ 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರಕಾರ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ದೇಶಾದ್ಯಂತ ಹಬ್ಬುತ್ತಿದ್ದಂತೆ ಎಚ್ಚೇತ ಕೇಂದ್ರ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ‘ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ...

ವಂದೇ ಮಾತರಂ’ಗೆ ಅವಮಾನಿಸಿದರೆ 3 ವರ್ಷ ಜೈಲು ಶಿಕ್ಷೆ: ನಾಳೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ನವದೆಹಲಿ: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು,...

ಕುಂಭಮೇಳ ವೈರಲ್ ಯುವತಿ ಮೊನಾಲಿಸಾ ದಂಪತಿಗಳಿಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಹಿಂಪಡೆದುಕೊಂಡ ಕೇರಳ ಹೈ ಕೋರ್ಟ್

“ಕೊಚ್ಚಿ: ಕುಂಭಮೇಳ 2025 ರಲ್ಲಿ ಸಾಕಷ್ಟು ವೈರಲ್‌ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ ಹಾಗೂ ಆಕೆಯ...