ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ ಜಿಲ್ಲಾ ದರ್ಶನ ಮಾಡದೆ ಎಷ್ಟೋ ಸಮಯ ಕಳೆದಿದೆ ಉಡುಪಿಯ ಜನರ ಕಷ್ಟಕ್ಕೆ ಸ್ಪಂದಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜನಾಂಗೋಲನಕ್ಕೆ ಕರೆ ನೀಡಲಾಗುವುದು ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿಜಯ ಕೊಡವೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಜಿಲ್ಲೆಯಾದ್ಯಂತ ಮರಳಿನ ಸಮಸ್ಯೆ, ಕೆಂಪು ಕಲ್ಲಿನ ಸಮಸ್ಯೆ, ಪ್ರಾಕೃತಿಕ ವಿಕೋಪದಿಂದ ಮನೆ ಹಾನಿ, ಅತಿಯಾದ ಮಳೆಯಿಂದ ರೈತರ ಕೃಷಿ ಚಟುವಟಿಕೆ ಅಡಚನೆಯಾಗಿ ರೈತಾಪಿ ಜನರು ಕಂಗೆಟ್ಟಿದ್ದಾರೆ,
ಬಸವ ವಸತಿ ಯೋಜನೆ ಮನೆ ಸ್ಥಗಿತ, ಮೀನುಗಾರಿಕಾ ಮನೆ ಸ್ಥಗಿತ, ಬಡವರ ಮಾಸಿಕ ಪೆನ್ಸನ್ ಮೇಲೆ ಕಣ್ಣು, ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡದೆ ಮಲತಾಯಿ ಧೋರಣೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ.
ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ಉಡುಪಿ ಜಿಲ್ಲೆಯ ಜನರು ಅನುಭವಿಸುತ್ತಾ ಇದ್ದರು ಕಾಂಗ್ರೆಸ್ ಸರಕಾರದಿಂದ ನೀಯೋಜನೆಗೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಣೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ವಿಜಯ ಕೊಡವೂರ್ ರವರು ಹೇಳಿದರು
ಇಂದು ಉಡುಪಿಯ ಪತ್ರಿಕಾಭವನದಲ್ಲಿ ಉಡುಪಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚ್ ದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವುದು ಏಕಾವಿನ್ಯಾಸ ನಕ್ಷೆ ಅಥವಾ ನಮೂನೆ 9 ಮತ್ತು 11 ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆಯ ವತಿಯಿಂದ
ಕಳೆದ ಜುಲೈ 25 ರಂದು ಮಾಧ್ಯಮ ಪ್ರಕಟಣೆ ಮೂಲಕ ಕಾಂಗ್ರೆಸ್ ಸರಕಾರಕ್ಕೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಮೂಲಕ ಪರಿಹಾರ ನೀಡುವ ಮೂಲಕ ಕಾಯುತ್ತಿರುವ ಜಿಲ್ಲೆಯ ಬಡವರಿಗೆ ಹಾಗು ನೊಂದವರಿಗೆ ಕನಸಿನ ಮನೆ ಕಟ್ಟಲು ಸಹಾಯವಾಗುವಂತೆ ಕೆಲಸ ಮಾಡಲು ಕೋರಿದ್ದರು
ಕೂಡಾ ಸರಕಾರದ ಮತ್ತು ಉಡುಪಿ ಜಿಲ್ಲಾಡಳಿತದ ಕಡೆಯಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆ ಆಗದ ಕಾರಣ ಜವಾಬ್ದಾರಿಯುತ ಪ್ರತಿ ಪಕ್ಷವಾಗಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ನೇತೃತ್ವದಲ್ಲಿ ದಿನಾಂಕ ಜುಲೈ 28 ರಂದು ಸಾವಿರಾರು ಸಂಖ್ಯೆಯಲ್ಲಿ ಏಕ ವಿನ್ಯಾಸ ನಕ್ಷೆ ಅಥವಾ ನಮೂನೆ 9 ಮತ್ತು 11 ವಂಚಿತ ಸಾರ್ವಜನಿಕರೊಂದಿಗೆ ಬ್ರಹತ್ ಪಾದಯಾತ್ರೆ
ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿ ವಾರ ಕಳೆಯುತ್ತಾ ಬಂದರೂ ಪರಿಹಾರ ದೊರೆಯಲಿಲ್ಲ ಅವರಿಗೆ ಜಿಲ್ಲೆಯ ಜನರ ನೆಮ್ಮದಿಯ ಬದುಕು ಬೇಡವಾಗಿದ್ದು ಈ ಮೇಲಿನ ಎಲ್ಲಾ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸದೆ
ಸಮರ್ಪಕವಾಗಿ ಜನರ ಕಷ್ಟಕ್ಕೆ ಸ್ಪಂದಿಸದೆ ಇದ್ದಲ್ಲಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿರುವ ವಿಚಾರವಾಗಿ ಬ್ರಹತ್ ಜನಾಂದೋಲನ ನಡೆಸಲಾಗುವುದು ಎಂದು ಹೇಳಿದರು.
Leave a comment