ಮುಂಬೈ ಭೂಗತಲೋಕವನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಖಡಕ್ ಪೊಲೀಸ್ ಅಧಿಕಾರಿ ದಯಾನಾಯಕ್ ಅವರಿಗೆ ಅವರ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರ ಸರಕಾರ ಪದೋನ್ನತಿ ನೀಡಿ ಗೌರವ ಸಲ್ಲಿಸಿದೆ
ದಯಾ ನಾಯಕ್ ಅವರು ನಾಳೆ ನಿವೃತ್ತರಾಗುತ್ತಿದ್ದು, ಇಂದು ಅವರನ್ನು ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಬಡ್ತಿ ಮುಂಬಡ್ತಿ ನೀಡಲಾಗಿದೆ.

80 ಎನ್ ಕೌಂಟರ್ ಮಾಡಿ ಖ್ಯಾತಿಯ ಜೊತೆ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದ ದಯಾ ನಾಯಕ್ ಅವರಿಗೆ ಇದೀಗ ಪದೋನ್ನತಿ ಸಂದರ್ಭದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ
ಮೂಲತ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ತಾಲೂಕಿನ ಎಣ್ಣೆಹೊಳೆಯವರಾಗಿದ್ದು ತಮ್ಮ ಹುಟ್ಟೂರಿನಲ್ಲಿ ಕೊಡುಗೈದಾನಿಯಾಗಿ ಸಮಾಜಮುಖಿ ಚಟುವಟಿಕೆಗಳಿಗೆ ಬೆಂಬಲಿಲ ನೀಡುತ್ತಾ ಬರುತ್ತಿರುವ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ತನ್ನ ವೃತ್ತಿ ಜೀವನದ ಪ್ರಾರಂಭದಿಂದಲೂ ಕೂಡ ಧೈರ್ಯಶಾಲಿಯಾಗಿ ಸಮಾಜಘಾತುಕ ಚಟುವಟಿಕೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಎನ್ಕೌಂಟರ್ ನಡೆಸಿದ್ದರು.ಈ ಬಳಿಕ ಅವರಿಗೆ ಎನ್‌ಕೌಂಟರ್ ದಯಾ ನಾಯಕ್ ಎನ್ನುವ ಹೆಸರು ಬಂದಿತ್ತು.
ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರನ್ನು ಸಹ ಎಸಿಪಿಯನ್ನಾಗಿ ಮಾಡಲಾಗಿದೆ
Leave a comment