thekarnatakatoday.com
Karavali Karnataka

17ವರ್ಷ ಅರೋಗ್ಯ ಕೇಂದ್ರ ದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ವೈದ್ಯರಿಗೆ ನಾಡ ಸೇನಾಪುರ ಬಡಕೇರಿ ಹಡವು ಗ್ರಾಮಸ್ಥರಿಂದ ಪೌರಸನ್ಮಾನ

ನಾಡ ಸೇನಾಪುರ ಬಡಕೇರಿ ಹಡವು ಗ್ರಾಮಸ್ತರ ಪರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಡ ಇಲ್ಲಿ ಸತತ 17 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಖ್ಯಾತ ವೈದ್ಯರಾದ ಡಾಕ್ಟರ್ ಚಿಕ್ಮರಿ ಅವರನ್ನು ನಾಡ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಾಗರಿಕ ಸನ್ಮಾನ ದೊಂದಿಗೆ ಬೀಳ್ಕೊಡಲಾಯಿತು

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಗುಡ್ಡ ಮಾಡಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ವಹಿಸಿದರು ಮುಖ್ಯ ಅತಿಥಿಗಳಾಗಿ ರೇ ಫಾದರ್ ಝೆಡ್ ಎಮ್ ಡಿಸೋಜಾ ಕೈಗಾರಿಕಾ ತರಬೇತಿ ಕೇಂದ್ರನಾಡ ದ ಪ್ರಾಧ್ಯಾಪಕರಾದ kc ರಾಜೇಶ್ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಶೆಟ್ಟಿ ಬೆಳ್ಳಾಡಿ ಉಪಸ್ಥಿತರಿದ್ದರು

ಡಾಕ್ಟರ್ ಸುರೇಶ್ ಕುಮಾರ್ ಶೆಟ್ಟಿ ಶುಭ ಕೋರಿದರು ಇದೆ ಸಂದರ್ಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸುಮಾರು ವರ್ಷ ಸೇವೆ ಸಲ್ಲಿಸಿ ಬೇರೆ ಆಸ್ಪತ್ರೆಗೆ ವರ್ಗಾವಣೆಗೊಂಡಿರುವ ಶ್ರೀಮತಿ ಜಯಲಕ್ಷ್ಮಿ ಹೆಬ್ಬಾರ್ ಹಾಗೂ ಶ್ರೀಮತಿ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ಕೆನಡಾ ಪಿರೇರಾ ಪ್ರಸ್ತಾವಿಕ ಮಾತುಗಳನ್ನಾಡಿದರು

ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಗ್ರಾಮಪಂಚಾಯಿತಿ ಸದಸ್ಯರಾದ ಸುಧಾಕರ್ ಶೆಟ್ಟಿ ಸಂಸಾಡಿ ಶ್ರೀಧರ್ ಬಡಕೇರಿ ಜ್ಯೋತಿ ಪೂಜಾರಿ ಉದ್ಯಮಿಗಳಾದ ಸತೀಶ್ ಎಂ ನಾಯಕ್ ಶರತ್ ಶೆಟ್ಟಿ ಬೆಳ್ಳಾಡಿ ಅಶೋಕ್ ಶೆಟ್ಟಿ ಸಂಸಾಡಿ ಕರುಣಾಕರ ಶೆಟ್ಟಿ ಸಂದೀಪ್ ಪೂಜಾರಿ

ಸೇನಾಪುರ ಗೋಪಾಲಕೃಷ್ಣ ನಾಡ ಸತೀಶ್ ರಾಮನಗರ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಗಳಾದ ಸುರೇಶ್ ತೋಳರ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು ಮಾಜಿ ಕಾರ್ಯದರ್ಶಿ ವೆಂಕಟರಮಣ ಗಾಣಿಗ ವಂದಿಸಿದರು

Related posts

ಕಾಡಾನೆಗಳನ್ನು ಗುಂಡಿಕ್ಕಿ ಸಾಯಿಸಬೇಕೆನ್ನುವ ಹರೀಶ್ ಪೂಂಜಾ ಅರಣ್ಯ ಭೂಮಿಯಲ್ಲಿರುವ ಅಕ್ರಮ ಗಣಿಗಾರಿಕೆ ಹಾಗೂ ಹೋಂಸ್ಟೇಗಳನ್ನು ತೆರವು ಮಾಡಿಸಲಿ : ನವೀನ್ ಸಾಲಿಯಾನ್

The Karnataka Today

ಉಡುಪಿ -ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜುಗಲ್ ಬಂದಿ ಭಜನಾ ಸ್ಪರ್ಧೆ ಬೆಳ್ತಂಗಡಿಯ ಸುನಾದ ವಿನೋದಿನಿ ಭಜನಾ ತಂಡಕ್ಕೆ ಪ್ರಶಸ್ತಿ

The Karnataka Today

ಪೆರ್ಡೂರ್ ಅನಂತಪದ್ಮನಾಭ ದೇವಸ್ಥಾನಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

The Karnataka Today

Leave a Comment