thekarnatakatoday.com
National

4,500 ಮೀಟರ್ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಿದ  ಆಕಾಶ್ ಕ್ಷಿಪಣಿ ಲಡಾಖ್ ನಲ್ಲಿ ಯಶಸ್ವಿ ಪರೀಕ್ಷೆ

ಭಾರತೀಯ ಸೇನೆ ಲಡಾಖ್‌ನಲ್ಲಿಆಕಾಶ್”ಕ್ಷಿಪಣಿ ನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ಭಾರತೀಯ ಸೇನೆಗಾಗಿ ಈ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ನವೀಕರಿಸಲಾಗಿದ್ದು, 4,500 ಮೀಟರ್ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ಕಸ್ಟಮೈಸ್ ಮಾಡಲಾಗಿದೆ.


“ಭಾರತ, ಜುಲೈ 16 ರಂದು ಲಡಾಖ್‌ನಲ್ಲಿ ಎರಡು ವೈಮಾನಿಕ ಹೈಸ್ಪೀಡ್ ಮಾನವರಹಿತ ಗುರಿಗಳನ್ನು ನವೀಕರಿಸಿದ ರೂಪಾಂತರವಾದ ಆಕಾಶ್ ಪ್ರೈಮ್ ಯಶಸ್ವಿಯಾಗಿ ನಾಶಪಡಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ” ಎಂದು ಸಚಿವಾಲಯ ತಿಳಿಸಿದೆ.


ಇದು ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ಕ್ರಮವಾಗಿದೆ. ಭಾರತೀಯ ಸೇನೆಯು ಇಂದು ಲಡಾಖ್‌ ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ್ ಪ್ರೈಮ್,

ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ ಉನ್ನತ-ಎತ್ತರದ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿತು ಎಂದ ಸಚಿವಾಲಯ ತಿಳಿಸಿದೆ.

Related posts

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಆದೇಶ:: ಕೇಂದ್ರ ಗೃಹ ಸಚಿವಾಲಯ

The Karnataka Today

ರಾಷ್ಟ್ರೀಯ ಭದ್ರತಾ ಮಂಡಳಿಯ ನೂತನ ಅಧ್ಯಕ್ಷರಾಗಿ ರಾ ಮಾಜಿ ಮುಖ್ಯಸ್ಥ ಅಲೋಕ್ ಜೋಶಿ ನೇಮಕ

The Karnataka Today

ಜಮ್ಮು-ಕಾಶ್ಮೀರ ಉಗ್ರರ ದಾಳಿ ಪ್ರಕರಣ ಇಬ್ಬರು ಸ್ಥಳೀಯ ಉಗ್ರರು ಭಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ 

The Karnataka Today

Leave a Comment