ಮಂಗಳೂರು: ಮಂಗಳೂರಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಫಲಾನುಭವಿಗಳನ್ನು ಗುರಿಯಾಗಿಸಿಕೊಂಡ ಸೈಬರ್ ವಂಚಕರು ‘ಪೋಷಣ್ ಟ್ರ್ಯಾಕರ್’ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಈ ಹಗರಣದ ಬಗ್ಗೆ ಸಂತ್ರಸ್ತರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಾತೃ ವಂದನಾ ಯೋಜನೆಯ ಪ್ರಯೋಜನವೇನು?
ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಎರಡನೇ ಮಗು ಹೆಣ್ಣು ಮಗುವಾಗಿದ್ದರೆ, ಜೀವಂತವಾಗಿರುವ ಮೊದಲ ಎರಡು ಮಕ್ಕಳಿಗೂ ಈ ಪ್ರಯೋಜನ ದೊರೆಯಲಿದೆ
. ಮೊದಲ ಮಗುವಿಗೆ 5,000 ರೂ.ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಮತ್ತು ಎರಡನೇ ಮಗುವಿಗೆ, 6,000 ರೂ.ಗಳನ್ನು ಜನನದ ನಂತರ ಒಂದು ಕಂತಿನಲ್ಲಿ ನೀಡಲಾಗುತ್ತದೆ
. ಪೋಷಣ್ ಟ್ರ್ಯಾಕರ್’ ಆ್ಯಪ್ ದುರ್ಬಳಕೆ: ಮಾತೃ ವಂದನಾ ಯೋಜನೆಯಡಿ ಫಲಾನುಭವಿಗಳ ವೈಯಕ್ತಿಕ ವಿವರಗಳನ್ನು ‘ಪೋಷಣ್ ಟ್ರ್ಯಾಕರ್’ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು,
ಇದರಲ್ಲಿ ದುರ್ಬಳಕೆಯಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಮಂಗಳೂರಿನ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಆಶಾಲತಾ ಹೇಳಿದ್ದಾರೆ.
ಹಿಂದಿಯಲ್ಲಿ ಮಾತನಾಡುವ ವಂಚಕರು: ಗರ್ಭಿಣಿ ಮತ್ತು ಬಾಣಂತಿಯರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು, ಆಗಾಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಯಾಮಾರಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆಯಡಿ ಫಲಾನುಭವಿಗಳಿಗೆ ನಿಜವಾಗಿರೂ, 6,000 ಬರುತ್ತದೆ. ಆದರೆ, 12,000 ರಿಂದ 20,000 ರೂ.ವರೆಗೆ ಪಡೆಯಬಹುದು ಎಂದು ವಂಚಕರು ಸುಳ್ಳು ಹೇಳುತ್ತಿದ್ದಾರೆ
. ಹಿಂದಿಯಲ್ಲಿ ಮಾತನಾಡುವ ವಂಚಕರು, ಅಂಗನವಾಡಿ ಶಿಕ್ಷಕರ ಹೆಸರು ಸೇರಿದಂತೆ ಫಲಾನುಭವಿಗಳ ಸಂಪೂರ್ಣ ವಿವರಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. 8 ಫಲಾನುಭವಿಗಳಿಂದ ದೂರು ಸ್ವೀಕಾರ: ಆರ್ಥಿಕ ನೆರವು ಪಡೆಯಲು ಕೆಲವು ಪ್ರಕ್ರಿಯೆಯ ಶುಲ್ಕವನ್ನು ಪಾವತಿಸುವಂತೆ ಫಲಾನುಭವಿಗಳನ್ನು ವಂಚಕರು ಕೇಳುತ್ತಿದ್ದಾರೆ.
ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರಿಗೂ ಸ್ವಲ್ಪ ಹಣ ನೀಡಬೇಕು ಎನ್ನುತ್ತಿದ್ದಾರೆ. ಈ ಹಗರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶಾಮೀಲಾಗಿರುವ ಬಗ್ಗೆ ಫಲಾನುಭವಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕನಿಷ್ಠ ಎಂಟು ಫಲಾನುಭವಿಗಳಿಂದ ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ಅವರು ಹೇಳಿದರು.
ಮಕ್ಕಳ ಅಪೌಷ್ಟಿಕತೆ ಪತ್ತೆ ಮಾಡಲು ‘ಪೋಷಣ್ ಟ್ರ್ಯಾಕರ್’ ಹಣ ಪಾವತಿಗೆ ಲಿಂಕ್ ಕಳುಹಿಸುವ ವಂಚಕರು: ತನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಹಣ ಪಾವತಿ ಮಾಡಲು ಲಿಂಕ್ ಕಳುಹಿಸಲಾಗಿದೆ ಎಂದು ಫಲಾನುಭವಿಯೊಬ್ಬರು ಹೇಳಿದರು.
ಕೇಳಿದಷ್ಟು ಹಣವನ್ನು ಪಾವತಿಸಿದಾಗ, ನನ್ನ ಬ್ಯಾಂಕ್ ಖಾತೆಯಲ್ಲಿ ಉಳಿದಿದ್ದ ₹ 44,000 ಕಳುವಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಯೋಜನೆ ಲಾಭ ಪಡೆಯಲು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂದು ವಂಚಕರು ದಾರಿ ತಪ್ಪಿಸುತ್ತಿದ್ದಾರೆ
. ಇಂತಹ ವಂಚನೆಯ ಕರೆಗಳಿಗೆ ಸ್ಪಂದಿಸದಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಫಲಾನುಭವಿಗಳಿಗೆ ತಿಳಿವಳಿಕೆ ನೀಡುತ್ತಿದ್ದೇವೆ ಎಂದು ಆಶಾಲತಾ ಹೇಳಿದರು. ಈ ಹಗರಣದ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದೇವೆ” ಎಂದು ಅವರು ತಿಳಿಸಿದರು.