ಉಡುಪಿ ಜಿಲ್ಲೆಯ ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದ ಹಿರಿಯ ಗಣಿ ಭೂ ವಿಜ್ಞಾನಿ ಸಂದೀಪ್ ಜಿ ವರ್ಗಾವಣೆ ವಿಚಾರವಾಗಿ ನೆನ್ನೆ ಉಡುಪಿಯಲ್ಲಿ ನಡೆದಿರುವಂತಹ ಪ್ರತಿಭಟನೆ ಹಾಗೂ ಆಕ್ರೋಶ ರಾಜ್ಯದಲ್ಲಿ ಸಂಚಲನವನ್ನೇ ಉಂಟು ಮಾಡಿದೆ ರಾಜ್ಯದಲ್ಲಿ ಈತನಕ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು
ಈಗ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಯಿಂದ ಸರಕಾರಕ್ಕೆರಾಜ್ವಸ್ವ ನಷ್ಟ ಉಂಟು ಮಾಡುತ್ತಿರುವ ಕೆಲವು ಕ್ರಷರ್ ಮಾಲೀಕರ ಹಾಗೂ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ವಿರುದ್ಧ ಎಚ್ಚೆತ್ತುಕೊಂಡಿರುವ ಸರಕಾರ ನೂತನವಾಗಿ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸಿ ಪ್ರತಿ ಜಿಲ್ಲೆಗಳಲ್ಲಿರುವ ಖನಿಜ ಸಂಪತ್ತಿನ ಬಗ್ಗೆ ಫಿಟ್ ಮೆಜರ್ಮೆಂಟ್ ನಡೆಸಿ
ಈತನಕ ಅಕ್ರಮ ಗಣಿಗಾರಿಕೆಗೆ ವಿಧಿಸಿರುವ ದಂಡ ಪಾವತಿಯ ಮಾಡದಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ ವರದಿ ಪಡೆದುಕಾನೂನು ಕ್ರಮ ಕೈಗೊಳ್ಳುವುದರ ಬಗ್ಗೆ ಹಾಗೂ ಪ್ರಕರಣಗಳ ತ್ವರಿತಗತಿ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ಸೂಕ್ತ ಶಿಫಾರಸ್ಸು ಮಾಡಲು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.
ಉಪ ಸಮಿತಿ ಸದಸ್ಯರನ್ನಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಮತ್ತು ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ.
ರಾಜ್ಯ ಸರಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 13 (5) ಪ್ರಕಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ)ಯು ಈ ಸಂಪುಟ ಉಪಸಮಿತಿಗೆ ಅಗತ್ಯ ನೆರವು ನೀಡುವುದು. ಉಪ ಸಮಿತಿಯು ತನ್ನ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡಬೇಕು ಎಂದು ಸರಕಾರದ ಅಪರ ಕಾರ್ಯದರ್ಶಿ ಆರ್.ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.