ಇರಾನ್ ಮೇಲೆ ಇಸ್ರೇಲ್ ದಾಳಿ  ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಹತ್ಯೆ  ಮಾಡಿದ ಇಸ್ರೇಲ್

74

“ಇಸ್ರೇಲ್ ಶುಕ್ರವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಮುಖ್ಯಸ್ಥರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಟಿವಿ ದೃಢಪಡಿಸಿದೆ

. ಇರಾನ್‌ ನ ಪರಮಾಣು ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಇಂದು ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಅವರನ್ನು ಹತ್ಯೆ ಮಾಡಲಾಗಿದೆ. ಸಲಾಮಿ ಸಾವು ಇರಾನ್‌ ಸಂಘರ್ಷದ ನಾಯಕತ್ವಕ್ಕೆ ಕಠಿಣ ಹೊಡೆತ ನೀಡಿದೆ.

ರೆವಲ್ಯೂಷನರಿ ಗಾರ್ಡ್ಸ್, ಇರಾನ್ ದೇಶದ ಶಕ್ತಿಕೇಂದ್ರ ಎಂದು ಬಿಂಬಿತವಾಗಿದೆ. ಹಾಗಾಗಿ, ಇದನ್ನೇ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ದೇಶದ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ


ಸಲಾಮಿ ಆರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದರು ಮತ್ತು ಅಮೆರಿಕ ಹಾಗೂ ಇಸ್ರೇಲ್‌ಗೆ ಬೆದರಿಕೆ ಹಾಕುವ ಇತಿಹಾಸವನ್ನು ಹೊಂದಿದ್ದರು. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಇಸ್ರೇಲ್ ಅವರನ್ನು ಟಾರ್ಗೆಟ್ ಮಾಡಿದೆ.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರೆವಲ್ಯೂಷನರಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂದಿತ್ತು. ಇದಾದ ನಂತರ, ಇದು ದೇಶೀಯ ಭದ್ರತಾ ಪಡೆಯಾಗಿ ಮುಂದುವರಿಯಿತು.

ಸಿರಿಯಾ, ಲೆಬನಾನ್ ಮತ್ತು ಇರಾಕ್ ನಂತಹ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಹಾಯ ಮಾಡುವ ಅಂತರರಾಷ್ಟ್ರೀಯ ಪಡೆಯಾಗಿ ಗುರುತಿಸಿಕೊಂಡಿದೆ

Leave a comment

Leave a Reply

Your email address will not be published. Required fields are marked *

Related Articles

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...

ಅಮೆರಿಕ ಶ್ವೇತಭವನದಲ್ಲಿ ಔತಣಕೂಟ ವೇಳೆ ಶೂಟೌಟ್ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ....