ಒಂದು ದೇಶ ಒಂದು ಚುನಾವಣೆ ಅಭಿಯಾನಕ್ಕೆ ಸಾರ್ವಜನಿಕರು ಬೆಂಬಲಿಸಬೇಕು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

3

ಬೆಂಗಳೂರು: ದೇಶದಲ್ಲಿ ಒಂದಿಲ್ಲೊಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ವರ್ಷವೊಂದರಲ್ಲಿ 6 ತಿಂಗಳು ಆಡಳಿತಾತ್ಮಕ ಕೆಲಸ ಗಳು ನಡೆಯುವುದೇ ಇಲ್ಲ.


ಒಂದು ದೇಶ, ಒಂದು ಚುನಾವಣೆಯೇ ಇದಕ್ಕೆ ಪರಿಹಾರ. ಇದನ್ನು ಎಲ್ಲರೂ ಬೆಂಬಲಿಸಬೇಕು. ಇದಕ್ಕಾಗಿ ಸಾರ್ವಜನಿಕರೇ ಅಭಿಯಾನ ನಡೆಸಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಹೇಳಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಕುರಿತು ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಜತೆಗೆ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸದಾ ಕಾಲ ಚುನಾವಣೆ ನಡೆಯುವುದ ರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದರ ಬಗ್ಗೆ ನನ್ನ ಅನುಭವವನ್ನೇ ನಿಮ್ಮ ಮುಂದೆ ಇರಿಸುತ್ತೇನೆ.

2023ರಲ್ಲಿ ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದೆ. ಅದೇ ವರ್ಷದ ಸೆಪ್ಟೆಂಬರ್‌ನಿಂದಲೇ ಮಧ್ಯ ಪ್ರದೇಶ ವಿಧಾನಸಭೆಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದವು. . ಆ 4 ತಿಂಗಳು ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ.

ಚುನಾವಣೆ ಮುಗಿದು, ಹೊಸ ಸರ್ಕಾರ ಬಂದ ಎರಡೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು ಎಂದರು. ಲೋಕಸಭಾ ಚುನಾವಣೆ ಮುಗಿದು, ಮೋದಿ ಅವರು ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನಾನೂ ಕೃಷಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ.

ಸಚಿವಾಲಯದ ಕೆಲಸಗಳನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ಹೋಗುವಂತೆ ಸೂಚಿಸಿದರು. ಒಂದಿಡೀ ವರ್ಷ ಕೆಲಸ ಮಾಡಲು ಆಗಲಿಲ್ಲ. ಅದೇ ಸಂದರ್ಭದಲ್ಲಿ ಸರ್ಕಾರವೂ ಕೆಲಸ ಮಾಡಲಾಗಲಿಲ್ಲ ಎಂದರು

ಈ ಸಮಸ್ಯೆಯ ನಿವಾರಣೆಗೆ ಒಂದು ದೇಶ, ಒಂದು ಚುನಾವಣೆಯೇ ಪರಿಹಾರ. ಒಂದೇ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆಗೆ ಒಂದು ಮತಯಂತ್ರ, ವಿಧಾನಸಭಾ ಚುನಾವಣೆಗೆ ಇನ್ನೊಂದು ಮತಯಂತ್ರ ಇರಿಸಿದರೆ ಸಮಸ್ಯೆ ಏನು? ಈ ಪ್ರಶ್ನೆಯನ್ನು ನೀವೂ ಕೇಳಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಲೋಕಸಭೆಯಿಂದ ವಿಧಾನಸಭೆಯವರೆಗಿನ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆದರೆ, ಸಚಿವರು ಮತ್ತು ಪಕ್ಷದ ಕಾರ್ಯಕರ್ತರು ಉಳಿದ ನಾಲ್ಕರಿಂದ ಐದು ವರ್ಷಗಳನ್ನು ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮೀಸಲಿಡಲು ಸಾಧ್ಯವಾಗುತ್ತದೆ ಎಂದು ಅವರು ವಾದಿಸಿದರು.

ನಮ್ಮ ದೇಶವು ಪ್ರತಿ ಕೆಲವು ತಿಂಗಳಿಗೊಮ್ಮೆ ಕೋಟ್ಯಂತರ ರೂಪಾಯಿಗಳು, ಸರ್ಕಾರಿ ಯಂತ್ರೋಪಕರಣಗಳು ಮತ್ತು ಪಕ್ಷದ ನಿಧಿಯನ್ನು ಏಕೆ ವ್ಯರ್ಥ ಮಾಡುತ್ತಲೇ ಇರಬೇಕು?

ಮತದಾರರ ಪಟ್ಟಿಯನ್ನು ನವೀಕರಿಸುವುದು ಸಹ ಒಂದು ದೊಡ್ಡ ಕೆಲಸ. ತದನಂತರ, ಪ್ರಚಾರ ಮತ್ತು ಸಜ್ಜುಗೊಳಿಸುವಿಕೆ ಬರುತ್ತದೆ” ಎಂದು ಸಚಿವರು ಹೇಳಿದರು. ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸಹ ಒಂದು ಆಂದೋಲನಕ್ಕೆ ಸೇರಬೇಕೆಂದು ಕೇಂದ್ರ ಸಚಿವರು ಒತ್ತಾಯಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಪ್ರಕರಣ: ಮೃತದೇಹಗಳ ಅಸ್ತಿಪಂಜರ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಕೆಗೆ ಆಗ್ರಹ

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ ಜಿಪಿಆರ್ ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ....

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ  ಜೈಲು ಶಿಕ್ಷೆ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ...

ಧರ್ಮಸ್ಥಳ ಅಪರಿಚಿತ ಸಾವಿನ ಪ್ರಕರಣದ ಯುಡಿಆರ್ ಮಾಹಿತಿ ಡಿಲೀಟ್ ಬೆಳ್ತಂಗಡಿ ಪೊಲೀಸರ ಮೇಲೆ ಸಂಶಯದ ನೆರಳು

“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ...

ಎಮ್ಮೆ ಕಟ್ಟುತ್ತಿದ್ದ ಶೆಡ್ ದ್ವಂಸ ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ ಶಾಸಕರ ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ

ತೆಲಂಗಾಣ: ಜಾನುವಾರಗಳ ಶೆಡ್ ಧ್ವಂಸಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ರೈತ ದಂಪತಿ, ಕಾಂಗ್ರೆಸ್ ಶಾಸಕ...