ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾಸಕ ಯಶ್ ಪಾಲ್ ಸುವರ್ಣ ಇನ್ನಾದರೂ ಶಾಸಕ ಸ್ಥಾನದ ಜವಾಬ್ದಾರಿ ಅರಿತು  ಮಾದರಿ ಶಾಸಕರಾಗುವತ್ತ ಮುನ್ನಡೆಯಲ್ಲಿ::ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಶೆಟ್ಟಿಬಜಗೋಳಿ

3

ಉಡುಪಿ ಶಾಸಕ ಯಶಪಾಲ್ ಸುವರ್ಣ ರವರು ಭ್ರಷ್ಟಾಚಾರ ಹಾಗೂ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕಾರಣ ಇನ್ನಾದರೂ ತನ್ನ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಲಿ:ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ

ಸದಾ ಪ್ರಚಾರದಲ್ಲಿರಬೇಕು ಎಂಬ ಆಶಾಭಾವನೆಯೊಂದಿಗೆ ಇಲ್ಲ ಸಲ್ಲದ ವಿಚಾರಗಳನ್ನು ಮಾತನಾಡಿ ಕಳೆದ ಆದಿವೇಶನದ ಸಮಯದಲ್ಲಿ ಗೂಂಡಾಗಿರಿ ಮಾಡಿ ಅಮಾನತಾದ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣರವರಿಗೆ

ಈ ಹಿಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ ವೀರಪ್ಪ ಮೊಯ್ಲಿ ಮಲ್ಪೆ ಮಧ್ವರಾಜ್,ವಿ ಎಸ್ ಆಚಾರ್ಯ,ಆಸ್ಕರ್ ಫೆರ್ನಾಂಡಿಸ್,ವಿನಯ್ ಕುಮಾರ್ ಸೊರಕೆ,ಜಯಪ್ರಕಾಶ್ ಹೆಗ್ಡೆ ಇವರ ಆದರ್ಶಗಳನ್ನು ಮತ್ತು ಶಾಶ್ವತ ಅಭಿವೃದ್ದಿ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಗೂಂಡ ಸಂಪ್ರದಾಯವನ್ನು ಮರೆತು ಆದರ್ಶ ಜನಪ್ರತಿನಿಧಿಯಾಗುವುದರ ಬಗ್ಗೆ ಗಮನ ಹರಿಸುವುದು ಉತ್ತಮ.

ಇನ್ನು ಮುಂದೆಯಾದರೂ ತಾನೊಬ್ಬ ಜನರಿಂದ ಆಯ್ಕೆ ಆಗಿ ಜನ ಪರ, ಕ್ಷೇತ್ರದ ಅಭಿವೃದ್ದಿ ಪರ ಕೆಲಸ ಮಾಡುದು ತನ್ನ ಪ್ರಮುಖ ಜವಾಬ್ದಾರಿ ಎನ್ನುದನ್ನು ಮೊದಲು ಅರಿತು ಈ ಕೂಡಲೆ ಕಾರ್ಯಪ್ರವೃತ್ತರಾಗುವುದು ಒಳಿತು.

ಯಶಪಾಲ್ ಸುವರ್ಣರವರು ತನ್ನ ಬಾಯಲ್ಲಿ ಬಿಜೆಪಿ ಬಿಜೆಪಿ ಎಂದು ಪಠಣ ಮಾಡುತ್ತಾ ಹಿಂದಿನ ಬಾಗಿಲಲ್ಲಿ ಕಾಂಗ್ರೆಸ್ ನಾಯಕರ ಬಳಿ ತನ್ನ ರಕ್ಷಣೆಗಾಗಿ ಬೇಡಿಕೊಂಡು ಅಂಗಲಾಚಿ ತನ್ನ ಬೇಳೆ ಬೇಯಿಸಿಕೊಂಡದ್ದು ಗುಟ್ಟಾಗಿ ಉಳಿದಿಲ್ಲ ಎಂಬುದು ಬಿಜೆಪಿಯಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯವಾಗಿದೆ.

ಈಗಾಗಲೇ ಯಶಪಾಲ್ ಸುವರ್ಣ ಮೇಲೆ ಹಲವಾರು ಆರೋಪಗಳಿದ್ದು ಮುಂದಿನ ದಿನಗಳಲ್ಲಿ ನೈಜ ವಿಷಯಗಳನ್ನು ಯುವ ಕಾಂಗ್ರೆಸ್ ಉಡುಪಿ ಜಿಲ್ಲೆಯ ಜನರ ಮುಂದೆ ತೆರೆದಿಡುವ ಕೆಲಸವನ್ನು ಮಾಡಲಿದೆ,

ಹಾಗೂ ಇದಕ್ಕೂ ಮೀರಿ ತಾನಾಗಲಿ ತನ್ನ ಹಿಂಬಾಲಕರಿಂದಾಗಲಿ ಪುಂಡಾಟಿಕೆ ಬುದ್ಧಿ ತೋರಿದಲ್ಲಿ ಯುವ ಕಾಂಗ್ರೆಸ್ ಯಶಪಾಲ್ ಸುವರ್ಣ ಮಾಡಿರುವ ಅಕ್ರಮಗಳ ಬಗ್ಗೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...