ಟ್ರೇಡ್ ಯೂನಿಯನ್ ಕಾರ್ಯಕರ್ತನ ಹತ್ಯೆ ಪ್ರಕರಣ ಆರು ಜನ ಪಿಎಫ್ ಐ ಕಾರ್ಯಕರ್ತರಿಗೆ ಎರಡು ಪಟ್ಟು ಜೀವಾವಧಿ ಶಿಕ್ಷೆ ಹಾಗೂ 13,ಲಕ್ಷ ದಂಡ ವಿಧಿಸಿದ ನ್ಯಾಯಾಲಯ

62
2021 ರಲ್ಲಿ ನಡೆದಿದ್ದ ಟ್ರೇಡ್ ಯೂನಿಯನ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕ್ರಿಶೂರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿಷೇಧಿತ ಪಾಂಪ್ಯುಲರ್ ಫ್ರಾಂಟ್ ಆಫ್ ಇಂಡಿಯಾದ (PFI) ನ ಆರು ಕಾರ್ಯಕರ್ತರಿಗೆ ಎರಡು ಪಟ್ಟು ಜೀವಾವಧಿ ಶಿಕ್ಷೆ ಹಾಗೂ ಒಟ್ಟು 13 ಲಕ್ಷ ರೂ. ದಂಡವನ್ನೂ ವಿಧಿಸಿದೆ.


ರಾಜಕೀಯ ಪ್ರೇರಿತ ಕೊಲೆ ಪ್ರಕರಣ ಬಲವಾದ ವಿಧಿವಿಜ್ಞಾನ ಮತ್ತು ಡಿಜಿಟಲ್ ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ ‘ನಾಚು’ ಎಂದು ಕರೆಯಲಾಗುತ್ತಿದ್ದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಕಾರ್ಯಕರ್ತ ಶಮೀರ್ ನನ್ನು ರಾಜಕೀಯ ದ್ವೇಷದಿಂದ ಅಕ್ಟೋಬರ್ 22, 2021 ರಂದು ಹಾಡಹಗಲಿನಲ್ಲಿಯೇ ಹತ್ಯೆ ಮಾಡಲಾಗಿತ್ತು. ಮನ್ನುತ್ತಿಯಲ್ಲಿ ಆಟೊರಿಕ್ಷಾದಲ್ಲಿ ಬಂದ ಆರೋಪಿಗಳು ಶಮೀರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.

ಸೋಮವಾರ ಶಿಕ್ಷೆಗೆ ಗುರಿಯಾದವರಲ್ಲಿ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಮೂವರು ಹಾಗೂ ಪಿತೂರಿಯಲ್ಲಿ ಭಾಗಿಯಾದ ಮೂವರು ಇದ್ದಾರೆ. ಆರೋಪಿಗಳ ವಿರುದ್ಧ 68 ಸಾಕ್ಷಿಗಳು, 200 ಕ್ಕೂ ಹೆಚ್ಚು ದಾಖಲೆಗಳು ಮತ್ತು 22 ವಸ್ತುಗಳ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿತು.

ಸೈಬರ್ ಫೋರೆನ್ಸಿಕ್ಸ್, ಡಿಎನ್ಎ ವರದಿಗಳು ಮತ್ತು ಇತರ ವೈಜ್ಞಾನಿಕ ಪುರಾವೆಗಳು ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಕಳೆದ ತಿಂಗಳು ಪ್ರತ್ಯೇಕ ಪ್ರಕರಣದಲ್ಲಿ 2022 ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿ ಶಮ್ಲಾದ್ ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು.

ಆರೋಪ ಮಲಪ್ಪುರಂನ ಮಂಜೇರಿಯ PFI ಸದಸ್ಯ ಶಮ್ನಾದ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತನ ತಲೆಗೆ 7 ಲಕ್ಷ ರೂ. ಬಹುಮಾನ ಕೂಡಾ ಘೋಷಿಸಿತ್ತು. ಎನ್‌ಐಎ ಸತತ ಪ್ರಯತ್ನದ ಬಳಿಕ ಕೊನೆಗೂ ಎರ್ನಾಕುಲಂನಲ್ಲಿ ಸಿಕ್ಕಿಬಿದ್ದಿದ್ದಾನೆ.

Leave a comment

Leave a Reply

Your email address will not be published. Required fields are marked *

Related Articles

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾರ್ಜ್ ಕುರಿಯನ್

“ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ರಾಜ್ಯಸಭಾ ಅವಧಿ ಅಂತ್ಯವಾದ...

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ ಕೇಂದ್ರ ಸರಕಾರ

“ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ್ದು, ಸದ್ಯ...

ಕಾಶಿ ಗಂಜ್ ಶಹೀದಾ ಮಸೀದಿ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ರೈಲ್ವೇ ಇಲಾಖೆ

ವಾರಣಾಸಿ: ವಾರಣಾಸಿಯ ಕಾಶಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಮೀಪದಲ್ಲಿರುವ ಗಂಜ್ ಶಹೀದಾ ಮಸೀದಿಯನ್ನು ತೆರವುಗೊಳಿಸುವಂತೆ...

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ

“ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್...