ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಹಾಗೂ ಪೆಹಲ್ಗಮ್ ಉಗ್ರರ ಕೃತ್ಯದಲ್ಲಿ ಮಡಿದವರಿಗೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ

4

*ಕ್ಷಾತ್ರ ತೇಜಸ್ಸು ಉಳಿದರಷ್ಟೇ ಹಿಂದುತ್ವದ ಉಳಿವು* ಪೆಹಲ್ಗಮ್ ಕೃತ್ಯದಲ್ಲಿ ಮಡಿದವರು, ಸುಹಾಸ್ ಶೆಟ್ಟಿ ಶ್ರದ್ದಾಂಜಲಿ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿಕೆ*ಸುರತ್ಕಲ್: ಪೆಹಲ್ಗಮ್ ನಲ್ಲಿ ಹಿಂದೂ ಎಂಬ ಕಾರಣಕ್ಕಾಗಿ ಭಯೋತ್ಪಾದಕರು ದಾಳಿ ಮಾಡಿ 26 ಅಮಾಯಕರನ್ನು ಕೊಂದ ಬಳಿಕವೂ ನಮ್ಮ ದೇಶದೊಳಗೆ ಕೆಲವು ದೇಶದ್ರೋಹಿಗಳಲ್ಲಿ ಪಾಕಿಸ್ತಾನ ಪರವಾದ ಮಾನಸಿಕತೆ ಇದೆ.ಇಂಥ ಮಾನಸಿಕತೆ ಇರುವ ತನಕ ನಮ್ಮಲ್ಲಿ ಒಂದು ಸಮುದಾಯಕ್ಕೆ ಹೆದರಿ ರಾಜಕೀಯ ಮಾಡಬೇಕಾದ ಸ್ಥಿತಿ ಇದೆ ಎಂದು ಹಿಂದೂ ಜಾಗರಣೆ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.ಪೆಹಾಲ್ಗಮ್ ಕೃತ್ಯದಲ್ಲಿ ಬಲಿಯಾದ 26 ಅಮಾಯಕ ಹಿಂದೂಗಳ ಹಾಗೂ ಜಿಹಾದಿ ಕ್ರತ್ಯಕ್ಕೆ ಬಲಿಯಾದ ಹಿಂದೂ ಹುಲಿ ಸುಹಾಸ್ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ಕೋರಿ ಬುಧವಾರ ಕುಳಾಯಿಯ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಹಾಗೂ ಗೆಳೆಯರ ಬಳಗ ಸುರತ್ಕಲ್ ವತಿಯಿಂದ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.ಕರಾವಳಿಯಲ್ಲಿ ಬೆನ್ನ ಹಿಂದಿನಿಂದ ದಾಳಿ ಮಾಡಿ ಕೊಲೆಗೈಯುವ ಮೂಲಕ ಹಿಂದೂ ಸಮಾಜವನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಫಾಝಿಲ್ ಕೊಲೆಯಾದಾಗ ಆತನನ್ನು ಅಮಾಯಕ ಎಂದು ಬಿಂಬಿಸುವ ಯತ್ನ ರಾಜಕೀಯ ಪಕ್ಷಗಳೂ ಸೇರಿ ಎಲ್ಲ ಕಡೆಯಿಂದ ನಡೆಯಿತು.ಹಾಗಾದರೆ ಶರತ್ ಮಡಿವಾಳ, ಪ್ರವೀಣ್ ನೆಟ್ಟಾರ್, ದೀಪಕ್ ರಾವ್, ಹರ್ಷ ಇವರೆಲ್ಲ ಏನು ಮಾಡಿದ್ದರು? ಒಂದು ಇರುವೆಗೂ ಹಾನಿ ಮಾಡದ ದೀಪಕ್ ರಾವ್ ಹತ್ಯೆಯದಾಗ ಅವರನ್ನು ಅಮಾಯಕ ಎಂದು ಹೇಳಿದವರು ಎಷ್ಟು ಮಂದಿ ಇದ್ದಾರೆ? ಅವರು ಕೊಲೆಯಾಗಲು ಮಾಡಿದ ತಪ್ಪಾದರೂ ಏನು?ಹಿಂದುತ್ವ ಉಳಿಯಬೇಕಾದರೆ ಕ್ಷಾತ್ರ ತೇಜಸ್ಸಿನ ಹಿಂದೂ ಯುವಕರು ಅನಿವಾರ್ಯ. ಅಂತ ಯುವಕರನ್ನು ಬೆಂಬಲಿಸಬೇಕ್ಕಾದ್ದು ಅನಿವಾರ್ಯ ಎಂದು ಹೇಳಿದರು.ಸುಹಾಸ್ ಸಾವು ಅಂತ್ಯ ಆಗಬಾರದು ಅದೊಂದು ಹೊಸದರ ಆರಂಭವಾಗಲಿ ಇಂದ ಶ್ರೀಕಾಂತ್ ಶೆಟ್ಟಿ, ಹಿಂದುತ್ವದ ಭದ್ರಾಕೋಟೆ ಉಳಿಯಬೇಕಾದರೆ ಸುಹಾಸ್ ಶೆಟ್ಟಿ ಅವರಂಥ ಕ್ಷಾತ್ರ ತೇಜಸ್ಸಿನ ಯುವಕರನ್ನು ಉಳಿಸಲು ಸಮಾಜವೇ ಮುಂದೆ ಬರಬೇಕು ಎಂದರು.ನಾವು ಸೋತಿರುವುದು ನಮ್ಮ ಒಳ್ಳೆಯತನಗಳಿಂದಲೇ. ಅದಕ್ಕಾಗಿ ನಮ್ಮಲ್ಲಿ ಒಳ್ಳೆಯತನದ ಜೊತೆಗೆ ಛತ್ರಪತಿ ಶಿವಾಜಿಯ ತಂತ್ರಗಾರಿಕೆಯು ಬೇಕು ಎಂದರು.ಉದ್ಯಮಿ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಹಿಂದುತ್ವ, ಹಿಂದೂ ಯುವಕರ ಮೇಲಿನ ದಾಳಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ನಮ್ಮಲ್ಲಿ ಇವುಗಳನ್ನು ತಡೆದು ನಿಲ್ಲಿಸಬೇಕಾದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಮಾದರಿಯ ಸರ್ಕಾರ ಬೇಕಿದೆ ಎಂದು ಹೇಳಿದರು.
ಹಿಂದೂ ಯುವಕರ ಹತ್ಯೆಯದಾಗ ಮನೆಗೆ ಹೋಗಿ ಸಾಂತ್ವನ ಹೇಳಿ ಹಣ ಕೊಟ್ಟು ಬರುವ ಇಲ್ಲಿಯ ಹಿಂದೂ ಪರ ಎಂಬ ಭಾವನೆಯ ರಾಜಕೀಯ ಪಕ್ಷದ ನಾಯಕರನ್ನು ನಂಬಿಕೊಂಡು ಹಿಂದೂ ಸಮಾಜದ ರಕ್ಷಣೆಯ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.ಸತ್ತ ಮೇಲೆ ಮನೆಗೆ ಹೋಗಿ ಹಣ ಕೊಟ್ಟು ಬರುವ ಬದಲು ಹಿಂದುತ್ವಕ್ಕಾಗಿ ಜೀವ ಕೊಡಲು ತಯಾರಿರುವ ಯುವಕರ ಬೆನ್ನು ತಟ್ಟಿ ಅವರನ್ನು ಪ್ರೋತ್ಸಾಹಿಸುವ ನಾಯಕರು ಸೃಷ್ಟಿಯಾಗ್ಬೇಕು. ಆಗ ಸುಹಾಸ್ ನಂಥ ಇನ್ನಷ್ಟು ಯುವಕರು ಹಿಂದೂ ಸಮಾಜದ ರಕ್ಷಣೆಗೆ ಎದ್ದು ಬರುತ್ತಾರೆ ಎಂದು ಹೇಳಿದರು.ಸುಹಾಸ್ ಶೆಟ್ಟಿಯವರ ಮಾವ ರಾಜೇಶ್ ಭಂಡಾರಿ ಮಾತನಾಡಿ, ಸುಹಾಸ್ ಕೊನೆಯವರೆಗೂ ರಾಜ ಗಾಂಭೀರ್ಯದಲ್ಲೇ ಬದುಕಿದ್ದನ್ನು ಸ್ಮರಿಸಿದರು.ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ನಿಕಟಪೂರ್ವ ಕಾರ್ಪೋರೇಟರ್ ಗಳಾದ ವೇದಾವತಿ, ವರುಣ್ ಚೌಟ, ಹಿರಿಯರಾದ ಗೀತಾ ವೇಣುಗೋಪಾಲ್ ಹಾಜರಿದ್ದರು.ಆರಂಭದಲ್ಲಿ ಭಾರತಾಂಬೆಯ ಭಾವಚಿತ್ರ ಹಾಗೂ ಸುಹಾಸ್ ಶೆಟ್ಟಿ ಭಾವಚಿತ್ರ ಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು.

Leave a comment

Leave a Reply

Your email address will not be published. Required fields are marked *

Related Articles

ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ಅಂತಿಮ ಸೋಮವಾರ ಘೋಷಣೆ ಸಾಧ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ...

ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ ನಾಲ್ವರಿಗೆ ಗಾಯ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಮೈಸೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶ ಮುಗಿಸಿ ವಾಪಸ್‌...

ರಾಜ್ಯದಲ್ಲಿ ‘ಪರಮಾಣು ವಿದ್ಯುತ್ ಸ್ಥಾವರ’ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ   :: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್

ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ಸಿಕ್ಕಿದೆ. ಜೊತೆಗೆ ರಾಷ್ಟ್ರೀಯ ಉಷ್ಣ ವಿದ್ಯುತ್...