ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ನಿಷೇಧಿತ ಪಿ ಎಫ್ ಐ ಸಂಘಟನೆ ಬಜಪೆ ಪೊಲೀಸ್ ಕಾನ್ಸ್ಟೇಬಲ್ ರಶೀದ್ ಕೈವಾಡ ಆರೋಪ ತನಿಖೆಯನ್ನು ಎನ್ಐಎ ಗೆ ಒಪ್ಪಿಸಿ :: ವಿಶ್ವ ಹಿಂದೂ ಪರಿಷತ್ ಜಾಗರಣ ವೇದಿಕೆ

4

“ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೈವಾಡವಿದ್ದು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಹಿಂದೂ ಜಾಗರಣ ವೇದಿಕೆ (ಎಚ್‌ಜೆವಿ) ಸೋಮವಾರ ಆಗ್ರಹಿಸಿದೆ

. ಪತ್ರಿಕಾಗೋಷ್ಠಿಯಲ್ಲಿ, ಎಚ್‌ಜೆವಿ ಪ್ರಾಂತ ಪ್ರಮುಖ ಕೆಟಿ ಉಲ್ಲಾಸ್ ಮತ್ತು ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಅವರು, ಪಿಎಫ್‌ಐ ನಡೆಸಿದ ಕೊಲೆಗಳ ಕಾರ್ಯವೈಖರಿ ಹಾಗೂ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವೇಳೆ ನಡೆದಿರುವ ಕಾರ್ಯವೈಖರಿಯಲ್ಲಿ ಬಹಳಷ್ಟು ಹೋಲಿಕೆಗಳಿವೆ.

ಮೊಹಮ್ಮದ್ ಫಾಜಿಲ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಸುಹಾಸ್ ಹತ್ಯೆ ಮಾಡಲಾಗಿದೆ ಎಂದು ತೋರುತ್ತಿಲ್ಲ ಎಂದು ಹೇಳಿದ್ದಾರೆ

ಕೆಲ ದುಷ್ಟಶಕ್ತಿಗಳು ಸುಹಾಸ್ ಕೊಲೆಗೆ 50 ಲಕ್ಷ ರೂ. ಸಂಗ್ರಹಿಸಿರುವ ಮಾಹಿತಿಯಿದೆ. ಕುಡುಪುವಿನಲ್ಲಿ ಅಶ್ರಫ್ ಎಂಬಾತನ ಕೊಲೆ ನಡೆದ ಮೂರು ದಿನದಲ್ಲಿ ಪಿಎಫ್‌ಐ ಮಾದರಿ ಯಲ್ಲಿ ಈ ಕೊಲೆ ನಡೆಸಲಾಗಿದೆ.

ಕೊಲೆ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಲು ಯಾವುದೇ ಆತುರ ಇರಲಿಲ್ಲ. ಸುಹಾಸ್ ಸಾವಿನ ಬಗ್ಗೆ ಖಾತ್ರಿಯಾದ ಬಳಿಕ ಆರೋಪಿಗಳು ಆರಾಮವಾಗಿ ಸ್ಥಳದಿಂದ ತೆರಳಿದ್ದಾರೆ.

ಸ್ಥಳೀಯರ ಸಹಕಾರದಿಂದ ಈ ಹತ್ಯೆ ನಡೆದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ರಶೀದ್ ಆರೋಪಿಗಳಿಗೆ ಸುಹಾಸ್ ಶೆಟ್ಟಿ ಚಲನವಲನಗಳ ಬಗ್ಗೆ ಮಾಹಿತಿ ನೀಡಿರುವ ಶಂಕೆಗಳು ವ್ಯಕ್ತವಾಗಿದೆ.

ಸುಹಾಸ್’ಗೆ ಪದೇ ಪದೇ ಫೋನ್ ಮಾಡುತ್ತಿದ್ದ ರಶೀದ್ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಸುಹಾಸ್ ಶೆಟ್ಟಿ ಸ್ನೇಹಿತರು ಹಾಗೂ ತಾಯಿ ಕೂಡ ಹೇಳಿದ್ದಾರೆ

. ಹತ್ಯೆಗೂ ಮೂರು ದಿನಗಳ ಹಿಂದಷ್ಟೇ ಎಸಿಪಿ ಸುಹಾಸ್ ಶೆಟ್ಟಿಗೆ ವಾಹನದಲ್ಲಿ ಶಸ್ತ್ರಾಸ್ತ್ರಗಳ ಕೊಂಡೊಯ್ಯದಂತೆ ಸೂಚಿಸಿದ್ದರು.

ಇದಾದ ಬಳಿಕವೇ ದಾಳಿ ನಡೆದಿದೆ. ದಾಳಿಕೋರರಿಗೆ ಸುಹಾಸ್ ಶೆಟ್ಟಿ ನಿಶಸ್ತ್ರಧಾರಿ ಎಂಬುದು ಹೇಗೆ ತಿಳಿದಿತ್ತು? ರಶೀದ್ ದಾಳಿಕೋರರಿಗೆ ಮಾಹಿತಿ ನೀಡಿರಬಹುದು ಎಂಬ ಅನುಮಾನಗಳಿವೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಇತರ ಆರೋಪಿಗಳಾದ ಕಳಸದ ರಜಿತ್ ಮತ್ತು ನಾಗರಾಜ್ ಯಾವುದೇ ಕ್ರಿಮಿನಲ್ ಹಿನ್ನೆಲೆಗಳನ್ನು ಹೊಂದಿಲ್ಲ. ಅವರು ಹಿಂದೂಗಳಾಗಿರುವುದರಿಂದ ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ.

ಪಿಎಫ್‌ಐ ನಿಷೇಧದ ನಂತರ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗಳ ನೀಡಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ. ರಾಜ್ಯ ಪೊಲೀಸರು ಪ್ರಕರಣವನ್ನು ತನಿಖೆ ಮಾಡಲು ಸಾಕಷ್ಟು ಸಮರ್ಥರಾಗಿದ್ದಾರೆ ಎಂಬ ಗೃಹ ಸಚಿವ ಜಿ ಪರಮೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ,

ರಾಜ್ಯ ಪೊಲೀಸರ ದಕ್ಷತೆಯ ಬಗ್ಗೆ ಅವರಿಗೆ ಯಾವುದೇ ಸಂದೇಹವಿಲ್ಲ, ಆದರೆ ಪ್ರಸ್ತುತ ಸರ್ಕಾರದ ಅಡಿಯಲ್ಲಿ ನ್ಯಾಯಯುತ ತನಿಖೆ ನಡೆಯುವ ನಂಬಿಕೆಯಿಲ್ಲ ಎಂದು ಹೇಳಿದರು”

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...