ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಮೈಸೂರು ದಸರಾ ಮುಕ್ತಾಯ: ಅರಮನೆ ಆವರಣದಿಂದ ಕಾಡಿನತ್ತ ಹೊರಟ ಗಜಪಡೆ

ಮೈಸೂರು: ಎರಡು ತಿಂಗಳ ಒಡನಾಟ.. ನಾಡಿನ ಜನರ ಪ್ರೀತಿ… ದಸರೆಯ ಸಂಭ್ರಮ… ಈಗ ಎಲ್ಲವೂ ನೆನಪುಗಳಷ್ಟೇ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಯಶಸ್ವಿಯಾಗಿ ಪೂರೈಸಿದ ಗಜಪಡೆ, ಮತ್ತೆ ಕಾಡಿನತ್ತ ಮುಖ ಮಾಡಿದೆ. ನಾಡಿನ ಹೆಮ್ಮೆಯ ವ...

· ಮೈಸೂರು
ಅಂಬಾರಿ ಹೊತ್ತ ಬೆನ್ನಿಗೆ ವಿದಾಯದ ಭಾರ – ಕಾಡಿನತ್ತ ಹೊರಟ ಗಜಪಡೆ
ಹಂಚಿಕೊಳ್ಳಿ:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಗಿದಿದ್ದು, ಚಿನ್ನದ ಅಂಬಾರಿಯನ್ನು ಹೊತ್ತ ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಆನೆಗಳ ತಂಡ ಈಗ ತಮ್ಮ ಮೂಲ ನೆಲೆಗಳತ್ತ ಮರಳಿದೆ. ಕಳೆದ ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ತಾಲೀಮು ನಡೆಸಿ, ಜನರ ಗಮನ ಸೆಳೆದಿದ್ದ ಗಜಪಡೆ ಇಂದು ಲಾರಿಗಳ ಮೂಲಕ ತಮ್ಮ ತಮ್ಮ ಶಿಬಿರಗಳಿಗೆ ಪ್ರಯಾಣ ಬೆಳೆಸಿದೆ. ದಸರಾ ಸಂಭ್ರಮಕ್ಕೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಅರಮನೆ ಆವರಣ ಮತ್ತೆ ಮೌನಕ್ಕೆ ಜಾರಿದೆ. ಮುಂದಿನ ವರ್ಷದ ದಸರಾ ಹಬ್ಬದವರೆಗೆ ಈ ಆನೆಗಳ ದರ್ಶನ ಪಡೆಯಲು ಸಾಧ್ಯವಿಲ್ಲದಿದ್ದರೂ, ಅವುಗಳ ಶಿಸ್ತು ಮತ್ತು ಗಾಂಭೀರ್ಯ ಜನರ ನೆನಪಿನಲ್ಲಿ ಉಳಿಯಲಿದೆ.

ಹಂಚಿಕೊಳ್ಳಿ: