ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಯಾದಗಿರಿ: ನಾರಾಯಣಪುರದಲ್ಲಿ ಎಮ್ಮೆಗೆ ಜನಿಸಿದ ಬಿಳಿ ಬಣ್ಣದ ಹೋರಿ ಕರು

ಯಾದಗಿರಿ: ಜಿಲ್ಲೆಯ ಹುಣಸಗಿ (Hunasagi) ತಾಲೂಕಿನ ನಾರಾಯಣಪುರ (Narayanapura) ಗ್ರಾಮದಲ್ಲಿ ಎಮ್ಮೆಯ ಹೊಟ್ಟೆಯಲ್ಲಿ ಹೋರಿ ಕರು ಜನಿಸಿದ ಅಚ್ಚರಿಯ ಘಟನೆ ನಡೆದಿದೆ. ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯ ಹೊಟ್ಟೆಯಲ್ಲಿ...

· ಯಾದಗಿರಿ
ಎಮ್ಮೆಯ ಹೊಟ್ಟೆಯಲ್ಲಿ ಹೋರಿ ಕರು ಜನನ
ಹಂಚಿಕೊಳ್ಳಿ:

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯೊಂದು ಬಿಳಿ ಬಣ್ಣದ ಹೋರಿ ಕರುವಿಗೆ ಜನ್ಮ ನೀಡಿದೆ. ಹತ್ತು ತಿಂಗಳ ಗರ್ಭಾವಸ್ಥೆಯ ನಂತರ ಈ ಕರು ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಮಾಲೀಕರು ಎಮ್ಮೆ ಮತ್ತು ಹೋರಿಯನ್ನು ಒಂದೇ ಕಡೆ ಕಟ್ಟಿರುತ್ತಿದ್ದ ಕಾರಣ, ಹೋರಿಯ ಸಂಪರ್ಕದಿಂದಲೇ ಈ ಕರು ಜನಿಸಿರಬಹುದು ಎಂದು ಶಂಕಿಸಲಾಗಿದೆ. ಸಾಮಾನ್ಯವಾಗಿ ಎಮ್ಮೆಗಳು ಕಪ್ಪು ಬಣ್ಣದ ಕರುಗಳಿಗೆ ಜನ್ಮ ನೀಡುತ್ತವೆ, ಆದರೆ ಈ ಬಾರಿ ಭಿನ್ನವಾದ ಕರು ಹುಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಂಚಿಕೊಳ್ಳಿ: