ನವದೆಹಲಿ: ಚಾಲನಾ ಪರವಾನಗಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರದ ಸಿದ್ಧತೆ
ನವದೆಹಲಿ: ಭಾರತೀಯರು ಮತ್ತು ವಿದೇಶಿ ಪ್ರಜೆಗಳಿಗೆ ಪ್ರತ್ಯೇಕ ವಿನ್ಯಾಸ ಹಾಗೂ ಬಣ್ಣದ ಚಾಲನಾ ಪರವಾನಗಿ ನೀಡುವುದು, ವೈದ್ಯಕೀಯ ಮತ್ತು ಸಂಪರ್ಕದ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು ಸೇರಿದಂತೆ ಚಾಲನಾ ಪರವಾನಗಿ ವ್ಯವಸ್...

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ಕಠಿಣಗೊಳಿಸಲು ಮುಂದಾಗಿದೆ. ಇನ್ನು ಮುಂದೆ ಚಾಲನಾ ಪರವಾನಗಿಯಲ್ಲಿ ರಕ್ತದ ಗುಂಪು, ಮೊಬೈಲ್ ಸಂಖ್ಯೆ ಮತ್ತು ತುರ್ತು ಸಂಪರ್ಕದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಸುರಕ್ಷಿತ ಚಾಲನೆ ಕುರಿತ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ಅಂಕಗಳನ್ನು ಶೇ 60ರಿಂದ ಶೇ 75ಕ್ಕೆ ಏರಿಸಲಾಗಿದೆ. ಅಲ್ಲದೆ, ವಯಸ್ಸು ಮತ್ತು ವಿಳಾಸದ ಪುರಾವೆಗಾಗಿ ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸಿದ ಅಫಿಡವಿಟ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.




