ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಮೈಸೂರು ಚಾಮುಂಡಿ ಬೆಟ್ಟ ತಲುಪಿದ ಇಳಕಲ್‌ನ ವೀರಣ್ಣ ಕುಂದರಗಿಮಠ: 460 ಕಿ.ಮೀ. ಹ್ಯಾಂಡಲ್‌ಲೆಸ್ ಸವಾರಿ

– ಇಳಕಲ್ ಬೈಕ್ ವೀರನಿಂದ ಸಾಧನೆ ಬಾಗಲಕೋಟೆ: ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಮಹೋತ್ಸವದ ಸಂಭ್ರಮದ ನಡುವೆ, ಬಾಗಲಕೋಟೆ(Bagalkote) ಜಿಲ್ಲೆಯ ಇಳಕಲ್ ನಗರದ ಸಾಹಸಿ ವೀರಣ್ಣ ಕುಂದರಗಿಮಠ(Veeranna Kundarag...

· ಬಾಗಲಕೋಟೆ
ಮೈಸೂರು ದಸರಾಗೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ 460 ಕಿ.ಮೀ. ಸಂಚರಿಸಿ ಸಾಹಸ
ಹಂಚಿಕೊಳ್ಳಿ:

ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಸಾಹಸಿ ವೀರಣ್ಣ ಕುಂದರಗಿಮಠ ಅವರು ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ 460 ಕಿಲೋಮೀಟರ್ ದೂರ ಕ್ರಮಿಸಿ ಮೈಸೂರು ತಲುಪಿದ್ದಾರೆ. ಸೋಮವಾರ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದಿಂದ ಹೊರಟ ಇವರು, ಮಂಗಳವಾರ ಬೆಳಿಗ್ಗೆ ಚಾಮುಂಡಿ ಬೆಟ್ಟವನ್ನು ತಲುಪಿ ನಾಡದೇವತೆಯ ದರ್ಶನ ಪಡೆದರು. ಈ ಸಾಹಸದ ಮೂಲಕ ಅವರು ಕನ್ನಡ ನಾಡು-ನುಡಿಯ ಹಿರಿಮೆ ಸಾರುವ ಜೊತೆಗೆ ವ್ಯಸನಮುಕ್ತ ಸಮಾಜ ಹಾಗೂ ಪರಿಸರ ಸಂರಕ್ಷಣೆಯ ಸಂದೇಶಗಳನ್ನು ಪಸರಿಸಿದರು. ಈಗಾಗಲೇ ಹಲವು ದಾಖಲೆಗಳನ್ನು ಮಾಡಿರುವ ವೀರಣ್ಣ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಹಂಚಿಕೊಳ್ಳಿ: